ಹೊಸದಿಲ್ಲಿ:ಬಿಜೆಪಿಯ ಬಹು ನಿರೀಕ್ಷಿತ 195 ಅಭ್ಯರ್ಥಿಗಳ ಮೊದಲ ಪಟ್ಟಿ ಶನಿವಾರ ಸಂಜೆ ಬಿಡುಗಡೆ ಮಾಡಲಾಗಿದ್ದು,ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ವಾರಾಣಸಿಯಿಂದ ಕಣಕ್ಕಿಳಿಯಲಿದ್ದು, ನಿರಾಶೆ ಎಂಬಂತೆ ಕರ್ನಾಟಕದ ಯಾವ ಅಭ್ಯರ್ಥಿಯ ಹೆಸರನ್ನು ಮೊದಲ ಪಟ್ಟಿಯಲ್ಲಿ ಪ್ರಕಟಿಸಿಲ್ಲ.
28 ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ. 50 ವರ್ಷದೊಳಗಿನ 47 ಅಭ್ಯರ್ಥಿಗಳಿದ್ದಾರೆ . 47 ಯುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. 27 ಎಸ್ಸಿ, 18 ಎಸ್ಟಿ, 57 ಮಂದಿ ಒಬಿಸಿಗೆ ಟಿಕೆಟ್ ನೀಡಲಾಗಿದೆ.
ವಾರಣಾಸಿಯಿಂದ ನರೇಂದ್ರ ಮೋದಿ, ಗಾಂಧಿನಗರ-ಅಮಿತ್ ಶಾ, ರಾಜನಾಥ್ ಸಿಂಗ್-ಲಕ್ನೋ, ಗುನಾ-ಜ್ಯೋತಿರಾಧಿತ್ಯ ಸಿಂಧಿಯಾ, ವಿಧಿಶಾ-ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವು ಘಟಾನುಘಟಿ ನಾಯಕರ ಕ್ಷೇತ್ರಗಳು ಫೈನಲ್ ಆಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಪಟ್ಟಿಯಲ್ಲಿ
ಮೊದಲ ಸ್ಥಾನದಲ್ಲಿದೆ. ನಂತರ ಅಮಿತ್ ಶಾ ಅವರ ಹೆಸರಿದೆ.
ಪಶ್ಚಿಮ ಬಂಗಾಳ- 26
ಮಧ್ಯಪ್ರದೇಶ -24
ಗುಜರಾತ್ -15
ರಾಜಸ್ಥಾನ್ -15
ಕೇರಳ -12,
ತೆಲಂಗಾಣ- 9
ಅಸ್ಸಾಂ -11
ಜಾರ್ಖಂಡ್- 11
ಛತ್ತೀಸ್ಗಢ- 11
ದೆಹಲಿ -5
ಜಮ್ಮ ಮತ್ತು ಕಾಶ್ಮೀರ- 2
ಉತ್ತರಾಖಂಡ -3
ಹಾಲಿ ಎಂಪಿಗಳ ಸಾಧನೆ, ಸರ್ವೇ ಆಧಾರದ ಮೇಲೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಸಮೀಕ್ಷೆಯಲ್ಲಿ ಸಾರ್ವಜನಿಕರ ಅಭಿಪ್ರಾಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆಯಂತೆ. ಪಕ್ಷದ ಅಂತರಿಕ ಮೌಲ್ಯಮಾಪನದ ಮೇಲೆ ಟಿಕೆಟ್ ಫೈನಲ್ ಮಾಡಲಾಗಿದೆ ಎನ್ನಲಾಗಿದೆ.









