ಬಂಟ್ವಾಳ: ಬಿಜೆಪಿ ಕ್ಷೇತ್ರ ಸಮಿತಿ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ.

Coastal Bulletin
ಬಂಟ್ವಾಳ: ಬಿಜೆಪಿ ಕ್ಷೇತ್ರ ಸಮಿತಿ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ.

ಬಂಟ್ವಾಳ :ಬಿಜೆಪಿ ಕ್ಷೇತ್ರ ಸಮಿತಿ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ ಸಿ ರೋಡ್ ನಲ್ಲಿ ಪ್ರತಿಭಟನೆಯು ಮಾ.02ರಂದು ಶನಿವಾರ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಧಾನಸೌಧದ ಒಳಗೆ ದೇಶದ್ರೋಹದ ಕೆಲಸವಾಗಿರುವ ಪಾಕಿಸ್ತಾನಕ್ಕೆ ಜೈಕಾರ ಕೂಗಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇದು ಸಿದ್ದರಾಮಯ್ಯ ಅವರ ಎಂಟು ತಿಂಗಳ ಸರಕಾರದ ಸಾಧನೆಯಾಗಿದೆ ಎಂದು ಆರೋಪ ಮಾಡಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ದೇಶದ್ರೋಹಿಗಳಿಗೆ ಶಿಕ್ಷೆ ನೀಡದ ಫಲವಾಗಿ ಮುಂದುವರಿದ ಭಾಗವಾಗಿ ಬಾಂಬ್ ಸ್ಫೋಟಕ್ಕೆ ಮುಂದಾಗಿರುವ ಘಟನೆ ನಡೆದಿದೆ. ರಾಜ್ಯ ಸರಕಾರ ಇದೇ ರೀತಿ ಭಯೋತ್ಪಾದಕ ರಿಗೆ ಸಹಕಾರ ನೀಡುತ್ತಾ ಬಂದರೆ ಮುಂದೊಂದು ದಿನ ಬಂಟ್ವಾಳ ದಲ್ಲಿಯೂ ಬಾಂಬ್ ಬ್ಲಾಸ್ಟ್ ಆಗಬಹುದು ಎಂದು ತಿಳಿಸಿದರು.

ಉಗ್ರವಾದಿಗಳ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸಂಪರ್ಕವಿರುವುದಕ್ಕೆ ಇತ್ತೀಚಿಗೆ ರಾಜ್ಯದಲ್ಲಿ ನಡೆಯುತ್ತಿರುವ ಅನೇಕ ಘಟನೆಗಳು ಸಾಕ್ಷಿಯಾಗಿವೆ ಎಂದು ಕಿಯೋನಿಕ್ಸ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆರೋಪ ಮಾಡಿದರು.

ಮಾಜಿ ರಾಜ್ಯ ವಕ್ತಾರ

ವಿಕಾಸ್ ಪುತ್ತೂರು ಮಾತನಾಡಿ, ಡಿಕೆಶಿ ಬ್ರದರ್ಸ್ ಬಾಂಬ್ ಬ್ಲಾಸ್ಟ್ ಮಾಡಲು ಹೊರಟಿದ್ದಾರೆ ಎಂದು ಆರೋಪ ಮಾಡಿದರು.

ಪ್ರತಿಭಟನೆಯಲ್ಲಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಸುಲೋಚನ ಜಿ.ಕೆ.ಭಟ್,ದೇವದಾಸ್ ಶೆಟ್ಟಿ, ಡೊಂಬಯ್ಯ ಅರಳ, ವಜ್ರನಾಥ್ ಕಲ್ಲಡ್ಕ, ಕಮಲಾಕ್ಷಿ ಕೆ.ಪೂಜಾರಿ, ಲಖಿತಾ ಆರ್ ಶೆಟ್ಟಿ, ರಾಮ್ ದಾಸ್ ಬಂಟ್ವಾಳ,ಚೆನ್ನಪ್ಪ ಕೋಟ್ಯಾನ್,ತುಂಗಪ್ಪ ಬಂಗೇರ, ದಿನೇಶ್ ಅಮ್ಟೂರು,ರವೀಶ್ ಶೆಟ್ಟಿ ಕರ್ಕಳ, ಪುರುಷೋತ್ತಮ ಶೆಟ್ಟಿ ವಾಮದಪದವು, ಪುರುಷೋತ್ತಮ ಸಾಲಿಯಾನ್, ಜನಾರ್ದನ ಬೊಂಡಾಲ, ಆನಂದ ಶಂಭೂರು, ಕಿಶೋರ್ ಪಲ್ಲಿಪಾಡಿ, ಮೋನಪ್ಪ ದೇವಸ್ಯ, ಶುಭಕರ ಶೆಟ್ಟಿ, ಚಿದಾನಂದ ರೈ ಕಕ್ಯ, ಸಂತೋಷ್ ರಾಯಿಬೆಟ್ಟು, ಕೇಶವ ದೈಪಲ, ರಮನಾಥ ರಾಯಿ, ಕಾರ್ತಿಕ್ ಬಲ್ಲಾಳ್,ರೋನಾಲ್ಡ್ ಡಿ.ಸೋಜ, ವಸಂತ ಕಕ್ಯಪದವು,ದಿನೇಶ್ ಶೆಟ್ಟಿ ದಂಬೆದಾರ್, ಗಣೇಶ್ ರೈ ಮಾಣಿ, ವಿಜಯ್ ರೈ, ಮೋಹನ್ ಪಿ.ಎಸ್.ಸದಾನಂದ ನಾವೂರ, ಹರೀಶ್ ರೈ ಪೆರಾಜೆ, ಗೋವಿಂದ ಪ್ರಭು, ಹರಿಪ್ರಸಾದ್, ರಾಧಾಕೃಷ್ಣ ತಂತ್ರಿ ದಾಮೋದರ ನೆತ್ತರಕೆರೆ, ಪುರುಷೋತ್ತಮ ಕೊಟ್ಟಾರಿ,ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Leave a Comment