ಕೇಂದ್ರ ಬಜೆಟ್ 2024:ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್ ನ ಮುಖ್ಯಾಂಶಗಳು.

Coastal Bulletin
ಕೇಂದ್ರ ಬಜೆಟ್ 2024:ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್ ನ ಮುಖ್ಯಾಂಶಗಳು.

ಹೊಸ ದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತನ್ನ 6ನೇ ಬಜೆಟ್ ಅನ್ನು ಇಂದು ಮಂಡಿಸಿದರು.

ಪ್ರಧಾನಿ ಮೋದಿ ಸಾರಥ್ಯದ 2ನೇ ಅವಧಿಯ ಎನ್‌ಡಿಎ ಸರ್ಕಾರದ ಕೊನೆಯ ಬಜೆಟ್ ಇದು. ಕೆಲವೇ ತಿಂಗಳಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಕಾರಣ ಈ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದು, ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್‌ ರೂಪಿಸಲಾಗಿದೆ. 2024 - 25ನೇ ಸಾಲಿನ ಕೇಂದ್ರ ಬಜೆಟ್‌ನ ಸಮಗ್ರ ವಿವರ ಇಲ್ಲಿದೆ.

1.ಆದಾಯ ತೆರಿಗೆ ಮಿತಿಯಲ್ಲಿ ಈ ವರ್ಷ ಯಾವುದೇ ಬದಲಾವಣೆ ಇಲ್ಲ.

2.ಕಳೆದ ವರ್ಷ ಘೋಷಿಸಿದ ರೀತಿ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ.

3.ಆದಾಯ ತೆರಿಗೆ ನೀತಿಯಲ್ಲೂ ಯಾವುದೇ ಬದಲಾವಣೆ ಇಲ್ಲ,ಹೊಸ ತೆರಿಗೆ ಪದ್ದತಿ ಹಾಗೂ ಹಳೇ ತೆರಿಗೆ ಪದ್ದತಿ ಹಾಗೆಯೇ ಇರಲಿದೆ.

4.ಲಕ್ಷ ದ್ವೀಪ ಸೇರಿದಂತೆ ಹಲವೆಡೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ.

5.ಎಲೆಕ್ಟ್ರಿಕ್ ವಾಹನ ಉತ್ಪಾದನೆ, ಚಾರ್ಜಿಂಗ್ ಸ್ಟೇಷನ್ ಹೆಚ್ಚಳಕ್ಕೆ ಆದ್ಯತೆ.

6.ದೇಶದ ಹಲವು ನಗರಗಳಲ್ಲಿ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಅನುದಾನ.

7.40 ಸಾವಿರ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತನೆ.

8.ಉಡಾನ್ ಯೋಜನೆಗೆ 517 ಹೊಸ ಮಾರ್ಗ - ಸಣ್ಣ ನಗರಗಳಿಗೂ ವಿಮಾನ.

9.ರಕ್ಷಣಾ ಇಲಾಖೆಗೆ ಬರೋಬ್ಬರಿ 11 ಲಕ್ಷ ಕೋಟಿ ರೂ. ಮೀಸಲು.

10.ದೇಶದ ಒಂದು ಕೋಟಿ ಮಹಿಳೆಯರು 'ಲಕ್ಷಾಧಿಪತಿ ದೀದಿ' ಆಗಲಿದ್ದಾರೆ.

11.ಆಶಾ, ಅಂಗನವಾಡಿ ಕಾರ್ಯಕರ್ತರಿಗೂ ಆಯುಷ್ಮಾನ್ ಭಾರತ ಯೋಜನೆ.

12.'ಜೈ ಜವಾನ್, ಜೈ

ಕಿಸಾನ್, ಜೈ ವಿಜ್ಞಾನ್ ಹಾಗೂ ಜೈ ಅನುಸಂಧಾನ್' ಮೋದಿ ಸರ್ಕಾರದ ಮಂತ್ರ

13.ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ವಿದ್ಯುತ್.

14.ಮುಂದಿನ 5 ವರ್ಷಗಳಲ್ಲಿ 3 ಕೋಟಿ ಹೊಸ ಮನೆ ನಿರ್ಮಾಣ.

15.2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ.

ಜಿಡಿಪಿಗೆ ಹೊಸ ಪರಿಭಾಷೆ ನೀಡಿದ ಕೇಂದ್ರ ಹಣಕಾಸು ಸಚಿವೆ GDG ಎಂದರೆ - ಬೆಳವಣಿಗೆ, ಅಭಿವೃದ್ದಿ ಹಾಗೂ ಪ್ರಗತಿ (Growth - Development - Progress ) ಎಂದರು.ಜಾಗತಿಕವಾಗಿ ಆರ್ಥಿಕ ಸಂಕಷ್ಟ ಸ್ಥಿತಿ ಇದ್ದರೂ ಭಾರತದ ಆರ್ಥಿಕತೆ ಸ್ಥಿರವಾಗಿದೆ,10 ವರ್ಷಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಅಗಾಧ ಬೆಳವಣಿಗೆ ನಡೆದಿದೆ.'ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್' ನಮ್ಮ ಧ್ಯೇಯ, ದೇಶದ 80 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಣೆ ನಮ್ಮ ಗುರಿಯಾಗಿದ್ದು ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ ಸಾರಥ್ಯದ ಸರ್ಕಾರದಲ್ಲಿ ಭಾರತದ ಆರ್ಥಿಕಾಭಿವೃದ್ದಿ ಕಂಡಿದೆ ಎಂದು ಕೇಂದ್ರ ಸಚಿವೆ ಹೇಳಿದರು.

ನಾವು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದೇವೆ,ಜನ್‌ ಧನ್ ಖಾತೆ ಮೂಲಕ ಜನರಿಗೆ ನೇರ ಲಾಭ ವರ್ಗಾವಣೆ ಯೋಜನೆ ಜಾರಿ ಮಾಡಲಾಗಿದೆ.ಯುವಕರು, ಬಡವರು, ಕೃಷಿಕರು ಹಾಗೂ ಮಹಿಳೆಯರು - ಈ ನಾಲ್ಕು ವರ್ಗಗಳನ್ನು ಗುರಿಯಾಗಿಸಿ ಕಾರ್ಯಕ್ರಮ,ಕುಶಲ ಕರ್ಮಿಗಳಿಗಾಗಿ ವಿಶೇಷ ಯೋಜನೆ ಕೇಂದ್ರ ಸರ್ಕಾರ ರೂಪಿಸಿದೆ ಎಂದರು.ಕೇವಲ ಒಂದು ಗಂಟೆಯ ಅವಧಿಯಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಎಲ್ಲರ ಗಮನ ಸೆಳೆದರು.

Leave a Comment