ಮುಂಬೈ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಓಮಿಕ್ರಾನ್ ಮತ್ತು ಕೊರೋನಾ ವೈರಸ್ ನಿಂದಾಗಿ ಮಹರಾಷ್ಟ್ರ ಹಲವು ಕಠಿಣ ಕ್ರಮಗಳನ್ನು ಜಾರೊಗೊಳಿಸಿದೆ. ಇಂದಿನಿಂದ 15 ದಿನಗಳ ಕಾಲ ಸಂಜೆ 5ರಿಂದ ಬೆಳ್ಳಗೆ 5 ರವರೆಗೆ ಎಲ್ಲವೂ ಬಂದ್.
ಕರೋನವೈರಸ್ ಪ್ರಕರಣಗಳ ಭಾರೀ ಏರಿಕೆ ಆಗುತ್ತಿರುವ ಕಾರಣ ಜನವರಿ 15 ರವರೆಗೆ ಸಂಜೆ 5 ರಿಂದ ಬೆಳಿಗ್ಗೆ 5 ರವರೆಗೆ ಮುಂಬೈನಲ್ಲಿರುವ ಜನರು ಬೀಚ್‌ಗಳು, ತೆರೆದ ಮೈದಾನಗಳು, ಸಮುದ್ರ ಮುಖಗಳು, ವಾಯುವಿಹಾರಗಳು, ಉದ್ಯಾನವನಗಳು ಮತ್ತು ಅಂತಹುದೇ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ನೀಷೆಧಿಸಲಾಗಿದೆ ಎಂದು ಮುಂಬೈ ಪೊಲೀಸರು ಹೊಸ ಆದೇಶದಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ಜಾರಿಗೆ ಬಂದಿರುವ ಆದೇಶದ ಅಡಿಯಲ್ಲಿ ಮುಂಬೈನಲ್ಲಿ ದೊಡ್ಡ ಸಭೆಗಳನ್ನು ಸಹ ನಿಷೇಧಿಸಲಾಗಿದೆ. ಸದ್ಯ ಈ ಆದೇಶ ಜನವರಿ 15 ರವರೆಗೆ ಜಾರಿಯಲ್ಲಿರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ
ಎಸ್ ಚೈತನ್ಯ ಹೇಳಿದ್ದಾರೆ. ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಜೊತೆಗೆ ಓಮಿಕ್ರಾನ್ ಸೋಂಕಿನ ಪ್ರಕರಣಗಳು ಇರುವುದರಿಂದ ಈ ನಿರ್ಬಂಧ ವಿಧಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಹೊಸ ರೂಪಾಂತರವು ರಾಜ್ಯದಲ್ಲಿ ಸೋಂಕುಗಳನ್ನು ಹೆಚ್ಚಿಸುತ್ತಿದೆ ಎಂದು ಹೇಳಲಾಗುತ್ತಿದೆ. ಹೊಸ ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮುಂಬೈ ಮಹಾನಗರದ ನಾಗರಿಕ ಸಂಸ್ಥೆ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೆಚ್ಚುತ್ತಿರುವ ಪ್ರಕರಣಗಳನ್ನು ನಿಭಾಯಿಸಲು ತನ್ನ ವಾರ್ಡ್ ಮಟ್ಟದ ಯುದ್ಧ ಕೊಠಡಿಗಳನ್ನು ಪುನಃ ಸಜ್ಜುಗೊಳಿಸಿದೆ. ಈ ವಾರ್ ರೂಮ್‌ಗಳನ್ನು ಎಲ್ಲಾ 24 ವಾರ್ಡ್‌ಗಳಲ್ಲಿ ಆಸ್ಪತ್ರೆಯ ದಾಖಲಾತಿಗಳು, ಆಮ್ಲಜನಕ ಮತ್ತು ಔಷಧದ ಅವಶ್ಯಕತೆಗಳು ಮತ್ತು ಲಸಿಕೆಯನ್ನು ನಿರ್ವಹಿಸಲು ಸ್ಥಾಪಿಸಲಾಗಿದೆ.














