ಒಬ್ಬನೇ ಒಬ್ಬ ಬಡ ಭಾರತೀಯ ಉಪವಾಸದಿಂದ ಇರಬಾರದು - ಪ್ರಧಾನಿ ಮೋದಿ

Coastal Bulletin
ಒಬ್ಬನೇ ಒಬ್ಬ ಬಡ ಭಾರತೀಯ ಉಪವಾಸದಿಂದ ಇರಬಾರದು - ಪ್ರಧಾನಿ ಮೋದಿ

ದೆಹಲಿ : ವ್ಯಾಕ್ಸಿನ್ ಒಂದು ಸುರಕ್ಷಾ ಕವಚ ಇದ್ದಂತೆ , ಪೋಲಿಯೋದಂತಹ ವ್ಯಾಕ್ಸಿನ್ ಗೆ ನಾವು 10 ವರ್ಷಗಳ ಕಾಲ ಕಾದಿದ್ದೇವೆ.ನಮ್ಮಿಂದ ಯುದ್ದೋಪಾದಿಯಲ್ಲಿ ವ್ಯಾಕ್ಸಿನ್ ವಿತರಣೆ ಮಾಡುವ ಕೆಲಸ ನಡೆಯುತ್ತಿದೆ.ನಮ್ಮಲ್ಲಿ ಶೇ.100 ರಷ್ಟು ವಾಕ್ಸಿನೇಷನ್ ಗುರಿ ಸಾಧಿಸುವಷ್ಟರಲ್ಲಿ ಕೊರೋನ ಮತ್ತೆ ವಕ್ಕರಿಸಿತು.ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ.ಈವರೆಗೆ 23 ಕೋಟಿ ಜನರಿಗೆ ವ್ಯಾಕ್ಸಿನ್ ಹಾಕಲಾಗಿದೆ.ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ಲಭ್ಯತೆ ಇನ್ನಷ್ಟು ಹೆಚ್ಚಲಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ದೇಶದಲ್ಲಿ ಪ್ರಸ್ತುತ ಕೊರೋನ ವಿರುದ್ಧದ ಹೋರಾಟದಲ್ಲಿ  7 ಕಂಪನಿಗಳು ವ್ಯಾಕ್ಸಿನ್ ಕಂಡು ಹಿಡಿಯುವಲ್ಲಿ  ಹಾಗೂ 3 ಕಂಪನಿಗಳು ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ. ಮೂಗಿನೊಳಗೆ ಸ್ಪ್ರೇ ಮೂಲಕ ವಾಕ್ಸಿನ್ ನೀಡುವ ಸಿದ್ಧತೆಯು ಕೊನೆಯ ಹಂತದಲ್ಲಿದೆ ಒಂದು ವೇಳೆ ಯಶಸ್ವಿಯಾದರೆ ತುಂಬಾ ವೇಗವಾಗಿ ಕಡಿಮೆ ಅವಧಿಯಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು,ವಿರೋಧ ಪಕ್ಷದ ನಾಯಕರುಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ, ನಮಗೆ WHO ದ ಕೆಲವೊಂದು ಕಂಡಿಷನ್ ಗಳಿಂದ ಸ್ಪಲ್ಪ ಅಡೆತಡೆಗಳಾಗಿವೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಮಕ್ಕಳ ಬಗ್ಗೆ ಹೆಚ್ಚಿನ ಕಾಲಜಿ ವಹಿಸಿದ ಮೋದಿ ಇನ್ನು ಮುಂದೆ ಲಸಿಕೆಯ ಸಂಪೂರ್ಣ ಜವಾಬ್ದಾರಿ ಹಾಗೂ ಸಂಪೂರ್ಣ ವೆಚ್ಚ ಕೇಂದ್ರ ಸರಕಾರ ಭರಿಸಲಿದೆ ಎಂದು ಘೋಷಿಸಿದರು. ಜೂನ್ 21 ರ ನಂತರ 18 ವರ್ಷ ಪೂರ್ತಿಯಾದ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುತ್ತದೆ ಎಂದರು. 

ಖಾಸಗಿ ಆಸ್ಪತ್ರೆಗಳು ರೂ.150 ಹೆಚ್ಚುವರಿ ಶುಲ್ಕ ಪಡೆಯಬಹುದಾಗಿದೆ.

ಮೋದಿ ಭಾಷಣದಲ್ಲಿ ಒಬ್ಬನೇ ಒಬ್ಬ ಬಡ ಭಾರತೀಯ ಉಪವಾಸ ಇರಬಾರದು ಹಾಗೂ ಮುಂದಿನ ದೀಪಾವಳಿ ವರೆಗೂ ಉಚಿತ ರೇಷನ್ ಘೋಷಿಸಿದರು.

Leave a Comment