Coastal Bulletin

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 5% ಗೆ ಬಂದಲ್ಲಿ ಮಾತ್ರ ಅನ್ ಲಾಕ್; ಜಿಲ್ಲಾಧಿಕಾರಿ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 5% ಗೆ ಬಂದಲ್ಲಿ ಮಾತ್ರ ಅನ್ ಲಾಕ್; ಜಿಲ್ಲಾಧಿಕಾರಿ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 20 ರಿಂದ 21 ಶೇ. ಇದ್ದು, ಸರಕಾರದ ನಿಯಮಾವಳಿಗಳ ಪ್ರಕಾರ 5 ಶೇಕಡಾಕ್ಕೆ ಇಳಿದಲ್ಲಿ ಮಾತ್ರ ಅನ್ ಲಾಕ್ ಗೆ ಅವಕಾಶ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ತಮ್ಮ ಕಚೇರಿಯಲ್ಲಿಂದು ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾರ್ಗಸೂಚಿಗಳನ್ನು ಇನ್ನಷ್ಟು ಕಠಿಣಗೊಳಿಸಲಾಗುತ್ತದೆ‌. ಆದ್ದರಿಂದ ಅನಗತ್ಯ ಸಂಚಾರ ಮಾಡುವುದಕ್ಕೆ ಕಡಿವಾಣ ಹಾಕಲಾಗುತ್ತದೆ. ಪಾಸಿಟಿವಿಟಿ ರೇಟ್ ಕಡಿಮೆಯಾಗಲು ಜನರ ಸಹಕಾರವೂ ಅಗತ್ಯ ಎಂದು

ಹೇಳಿದರು.

ಕೊರೊನಾ ಸೋಂಕಿತರ ಆಸ್ಪತ್ರೆ ಬಿಲ್ ವಿಚಾರದಲ್ಲಿ ಗೊಂದಲಗಳಿದ್ದು,  ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಅಲ್ಲದೆ ದೂರು ದಾಖಲಿಸದವರ ಬಿಲ್ ಗಳನ್ನು ಜಿಲ್ಲಾಡಳಿತ ಮುತುವರ್ಜಿ ವಹಿಸಿ ಪರಿಶೀಲನೆ ನಡೆಸಿ ಜನರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗುತ್ತದೆ. ದ.ಕ.ಜಿಲ್ಲೆಯಲ್ಲಿ 11 ಗ್ರಾಮಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ವಿಶೇಷ ಲಾಕ್ ಡೌನ್ ಮಾಡಲಾಗುತ್ತದೆ. ಆದ್ದರಿಂದ ಮದುವೆ, ಇನ್ನಿತರ ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Leave a Comment