Coastal Bulletin

ಮಕ್ಕಳಿಗೆ ಮದ್ಯ ಕುಡಿಸಿ ವಿಕೃತಿ ಮೆರೆದ ಯುವಕರು

ರಾಮನಗರ : ಮಕ್ಕಳಿಗೆ  ಮದ್ಯ ಕುಡಿಸಿ ವಿಡಿಯೋ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೋಡಿಹಳ್ಳಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಬಾಳೆ ತೋಟದಲ್ಲಿ 10 ವರ್ಷದೊಳಗಿನ 7 ಮಕ್ಕಳು ಬಾಡೂಟದ ಜತೆಗೆ ಮದ್ಯ ಕುಡಿಯುತ್ತಿರುವ 

ವಿಡಿಯೋ ವೈರಲ್ ಆಗಿದೆ.

ಮದ್ಯ ಕುಡಿದ ಬಳಿಕ ಮಕ್ಕಳು ಅವಾಚ್ಯ ಶಬ್ದಗಳಿಂದ ಬೈದಾಡಿಕೊಳ್ಳುತ್ತಿದ್ದಾರೆ. ಬಾಲಕನೊಬ್ಬ ತನಗೆ ಮತ್ತಷ್ಟು ಮದ್ಯ ಬೇಕು ಎಂದು ಕೂಗಾಡುತ್ತಾನೆ.ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಪ್ರಕರಣ ದಾಖಲು ಮಾಡಿಕೊಂಡ ಕೋಡಿಹಳ್ಳಿ ಠಾಣಾ ಪೊಲೀಸರು  ಮರಳೀಪುರ ಗ್ರಾಮದ ಗಣೇಶ್, ಪ್ರಮೋದ್,ಸೋಮಸುಂದರ್  ಎಂಬವರ ಮೇಲೆ ಕೇಸು ದಾಖಲಿಸಿ ಒಬ್ಬನನ್ನು ಬಂಧಿಸಿದ್ದಾರೆ.ಇಬ್ಬರು ತಲೆಮರೆಸಿಕೊಂಡಿದ್ದಾರೆ.

Leave a Comment