ಮಂಗಳೂರು: ಕಳೆದ ವಾರ ಕೇರಳದಲ್ಲಿ ನಡೆದ ಪುರಸಭೆ ಚುನಾವಣೆಯಲ್ಲಿ (Kerala Corporation Election) 47 ಮತಗಳ ಅಂತರದಿಂದ ಜಯಗಳಿಸಿದ ಸಂಭ್ರಮಾಚರಣೆಗೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇರಳದ ಸಿಪಿಎಂ ನಾಯಕ ಸಯೀದ್ ಅಲಿ ಮಜೀದ್ ಭಾನುವಾರ ರಾತ್ರಿ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಮಹಿಳೆಯರು ಸೇರಿದಂತೆ ನೂರಾರು ಎಡಪಂಥೀಯ ಕಾರ್ಯಕರ್ತರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸಯೀದ್ ಅಲಿ ಮಜೀದ್ ಭಾಷಣ ಮಾಡಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಕ್ಕಾಗಿ ಮಜೀದ್ ಅವರು ಮುಸ್ಲಿಂ ಲೀಗ್ ಅನ್ನು ಗುರಿಯಾಗಿಸಿಕೊಂಡು ಈ ಭಾಷಣ ಮಾಡಿದ್ದಾರೆ. ‘ಮತಗಳನ್ನು ಗೆಲ್ಲಲು ಮಹಿಳೆಯರನ್ನು ಮುಂದಿಟ್ಟುಕೊಂಡು ಕಣಕ್ಕಿಳಿದಿದ್ದಾರೆ’ ಎಂದು ಮಜೀದ್ ಆರೋಪಿಸಿದ್ದಾರೆ.
ಮುಸ್ಲಿಂ
ಲೀಗ್‌ನಿಂದ ಸ್ಪರ್ಧಿಸಿರುವ ಮಹಿಳಾ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ನೀಡಿದ ಅಸಭ್ಯ ಹೇಳಿಕೆಗಳಿಂದ ತೃಪ್ತರಾಗದ ಮಜೀದ್, ಸಿಪಿಎಂನ ಮಹಿಳೆಯರು ಕೂಡ ತಲೆತಗ್ಗಿಸುವಂತಹ ಹೇಳಿಕೆ ನೀಡಿದ್ದಾರೆ. “ನಮ್ಮಲ್ಲಿ ಮದುವೆಯಾದ ಮಹಿಳೆಯರಿದ್ದಾರೆ. ಆದರೆ, ಮತಗಳನ್ನು ಗಳಿಸಲು ನಾವು ಅವರನ್ನು ಪ್ರದರ್ಸನಕ್ಕಿಡಲಾಗುತ್ತಿಲ್ಲ. ಅವರು ಮನೆಯಲ್ಲಿಯೇ ಕುಳಿತುಕೊಳ್ಳಲಿ. ನಾವು ಮಹಿಳೆಯರೊಂದಿಗೆ ಮಲಗಲು ಮತ್ತು ಮಕ್ಕಳನ್ನು ಮಾಡಲು ಮದುವೆಯಾಗುತ್ತೇವೆ” ಎನ್ನುವ ಮೂಲಕ ವಿವಾದಕ್ಕೀಡಾಗಿದ್ದಾರೆ.










