ವಂದೇ ಮಾತರಂ ಗೀತೆ ಸ್ವಾತಂತ್ರ್ಯಕ್ಕೆ ಪ್ರೇರಣೆ: ಸುರೇಶ್ ಪರ್ಕಳ

Coastal Bulletin
ವಂದೇ ಮಾತರಂ ಗೀತೆ ಸ್ವಾತಂತ್ರ್ಯಕ್ಕೆ ಪ್ರೇರಣೆ: ಸುರೇಶ್ ಪರ್ಕಳ

ಬಂಟ್ವಾಳ :ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಗೀತೆ ಬಂಕಿಮಚಂದ್ರರಿಂದ ಸೃಷ್ಟಿಯಾಗಿತ್ತು. ಭಾರತೀಯ ಸಂಸ್ಕೃತಿಯ ನೆಲೆಯಲ್ಲಿ ರಚಿತವಾದ ಗೀತೆಯಿಂದ ದೇಶ ಭಕ್ತರು ಸ್ಫೂರ್ತಿಯನ್ನು ಪಡೆದಿದ್ದರು. ಸ್ವತಂತ್ರ ಭಾರತದಲ್ಲಿ ವಂದೇ ಮಾತರಂ ಮನೆ ಮನೆಗಳಲ್ಲಿ ಹಾಡುವ ಮೂಲಕ ರಾಷ್ಟ್ರೀಯ ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದು ಚಿಂತಕ ಸಾಮರಸ್ಯ ಟೋಳಿ ಸದಸ್ಯ ಸುರೇಶ ಪರ್ಕಳ ಹೇಳಿದರು.

ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಹಾಗೂ ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ ಇವರ ಸಹಯೋಗದೊಂದಿಗೆ ಜ. 13 ರಂದು"ವಂದೇ ಮಾತರಂ"ನೂರ ಐವತ್ತರ ಸಂಭ್ರಮ ಕಾರ್ಯಕ್ರಮವದಲ್ಲಿ ಭಾರತದ ಅಸ್ಮಿತೆ ವಂದೇ ಮಾತರಂ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಶಾಲಾ ಸಂಚಾಲಕರಾದ ಈಶ್ವರ ಪ್ರಸಾದ್ ಅವರು ಮಾತನಾಡಿ ಒಂದೇ ಮಾತರಂನ ಪ್ರೇರಣಾದಾಯಕ ಅಂಶಗಳನ್ನು ತಿಳಿಸಿದರು. ಅ.ಭಾ.ಸಾ.ಪ.ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾದ ರಾಜಮಣಿ ರಾಮಕುಂಜ ಅವರು ಮಾತನಾಡಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಂದೇ ಮಾತರಂ ಹಾಡುತ್ತಾ ಆ ಕರಾಳ ದಿನಗಳನ್ನು ವಿರೋಧಿಸಿದ ಘಟನೆಯನ್ನು ನೆನಪಿಸಿಕೊಂಡರು.

ಅ.ಭಾ.ಸಾ.ಪ. ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಆಡಳಿತಾಧಿಕಾರಿ,ಮುಖ್ಯೋಪಾಧ್ಯಾಯಿನಿ ಮಧುರಾ ಸ್ವಾಗತಿಸಿದರು. ವೇದಿಕೆಯಲ್ಲಿ

ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರಸ್ವತಿ ಮಾತಾಜಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ಬಾಯಾರ್ , ನಿವೃತ್ತ ಮುಖ್ಯ ಶಿಕ್ಷಕಿ ಜಯಶ್ರೀ ಶೆಣೈ ಬಂಟ್ವಾಳ, ಸೀಮಾ ಕೃಷ್ಣಪ್ರಸಾದ್ ಕಲ್ಲಡ್ಕ,ಪ್ರಶಾಂತ್ ಕಡ್ಯ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಭಾರತ ಸಂಸ್ಕೃತಿ ಪರಿಚಯ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಅಭಾಸಾಪ ವಿಭಾಗ ಸಂಯೋಜಕ ಸುಂದರ ಶೆಟ್ಟಿ ಇಳಂತಿಲ ವಿತರಿಸಿದರು. ಶಾಲಾ ವಿದ್ಯಾರ್ಥಿಗಳು ವಂದೇ ಮಾತರಂ ಗೀತೆಯನ್ನು ಹಾಡಿದರು. ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಐಕ್ಯ ಮಂತ್ರದೊಂದಿಗೆ ಮುಕ್ತಾಯಗೊಂಡಿತು. ಅಭಾಸಾಪ ಬಂಟ್ಟಾಳ ಸಮಿತಿ ಕಾರ್ಯದರ್ಶಿ ಮಧುರ ಕಡ್ಯ ಹಾಗೂ ಬಂಟ್ವಾಳ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Comment