ಸೂರಿಕುಮೇ‌ರ್ ಹೆದ್ದಾರಿಯಲ್ಲಿ ಕ್ರಾಸಿಂಗ್ ಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Coastal Bulletin
ಸೂರಿಕುಮೇ‌ರ್ ಹೆದ್ದಾರಿಯಲ್ಲಿ ಕ್ರಾಸಿಂಗ್ ಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಬಂಟ್ವಾಳ: ಸೂರಿಕುಮೇ‌ರ್ ಹೆದ್ದಾರಿಯಲ್ಲಿ ಕ್ರಾಸಿಂಗ್ ನೀಡಬೇಕಾಗಿ ಒತ್ತಾಯಿಸಿ ಸೂರಿಕುಮೇ‌ರ್ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಪ್ರತಿಭಟನೆ ಜ.16 ಶುಕ್ರವಾರ ನಡೆಯಿತು.

ಮಾಣಿ ಗ್ರಾಮಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಸೂರಿಕುಮೇರ್ ಜಂಕ್ಷನ್ ನ ಸ್ವಲ್ಪ ಹಿಂದೆ ಅಥವಾ ಮುಂದೆ ಕ್ರಾಸಿಂಗ್ ನೀಡಬೇಕು. ಒಂದು ವೇಳೆ ಸಮಸ್ಯೆಗೆ ಹೆದ್ದಾರಿ ಇಲಾಖೆ ಸ್ಪಂದಿಸಿದಿದ್ದರೆ ಮುಂದಿನ ದಿನಗಳಲ್ಲಿ ಹೆದ್ದಾರಿಯಲ್ಲಿ ಅಹೋರಾತ್ರಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

  ಈ ಭಾಗದಲ್ಲಿ ಶಾಲೆ, ದೇವಸ್ಥಾನ, ಮಸೀದಿ, ಚರ್ಚ್ ಗಳಿದ್ದು ಸಾರ್ವಜನಿಕರಿಗೆ ಕಷ್ಟವಾಗುತ್ತಿದ್ದು, ಧಾರ್ಮಿಕ

,ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

ರೆಸಿಡೆನ್ಸಿಯಲ್ ಇಂಜಿನಿಯರ್ ಬಿನೋದ್ ಮಾತನಾಡಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಸಿಸ್ಟೆಂಟ್ ಹೈವೆ ಇಂಜಿನಿಯರ್ ಚಿದಾನಂದ 

ಮಾಣಿ ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಸದಸ್ಯ ಮೆಲ್ವಿನ್ ಮಾರ್ಟಿಸ್, ಬ್ಯಾರಿ ಅಕಾಡೆಮಿ ರಾಜ್ಯ ಸದಸ್ಯ ಸಲೀಂ ಬರಿಮಾರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Comment