ಬ್ರಹ್ಮರಕೂಟ್ಲು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 90ರ ಸಂಭ್ರಮದ ಸಮಾರಂಭ.

Coastal Bulletin
ಬ್ರಹ್ಮರಕೂಟ್ಲು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 90ರ ಸಂಭ್ರಮದ ಸಮಾರಂಭ.

ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮರಕೂಟ್ಲು ಇದರ 90ರ ಸಂಭ್ರಮದ ಸಮಾರಂಭ ಡಿ.13ರಂದು ಅದ್ದೂರಿಯಾಗಿ ನೆರವೇರಿತು.

1935ರಲ್ಲೇ ಸ್ಥಾಪನೆಗೊಂಡ ಶಾಲೆಯಲ್ಲಿ ಈಗಾಗಲೇ ಅನೇಕ ಸತ್ಪ್ರಜೆಗಳ ನಿರ್ಮಾಣವಾಗಿದೆ. ಇಲಾಖೆಯ ಮಾನ್ಯತೆಯೊಂದಿಗೆ ಕನ್ನಡ ಹಾಗೂ ಇಂಗ್ಲೀಷ್‌ ಮಾಧ್ಯಮದಲ್ಲಿ ತರಗತಿಗಳನ್ನು ದ್ವಿತೀಯ ವರ್ಷ ಯಶಸ್ವಿಯಾಗಿ ನಡೆಸಿದೆ. ಇಲ್ಲಿಗೆ ತಮ್ಮ ಮಕ್ಕಳನ್ನು ಸೇರಿಸಿ ಉತ್ತಮ ಶಿಕ್ಷಣವನ್ನು ಉಚಿತವಾಗಿ ಪಡೆಯಿರಿ. ಮುಂದಿನ ೧೦ ವರ್ಷದಲ್ಲಿ ೧೦೦ರ ಸಂಭ್ರಮ ಇನ್ನಷ್ಟು ಪೋಷಕರ ಶಿಕ್ಷಣಾಸಕ್ತರ ಹಾಗೂ ಹಿರಿಯ ವಿದ್ಯಾರ್ಥಿಗಳ ನೆರವಿನಲ್ಲಿ ಅತಿ ವಿಜೃಂಭಣೆಯಿಂದ ನೆರವೇರಲಿ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಎಂದು ಬಿ ರಮಾನಾಥ ರೈ ಇವರು ಶುಭ ಹಾರೈಸಿದರು.


ಬೆಳಗ್ಗೆ ಧ್ವಜಾರೋಹಣವನ್ನು ಕಳ್ಳಿಗೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಪುರುಷೋತ್ತಮ ಕೊಟ್ಟಾರಿ ಇವರು ನೆರವೇರಿಸಿ ಶುಭಾಶಯದ ನುಡಿದರು. ಬಳಿಕ ವಿದ್ಯಾರ್ಥಿಗಳ ಏರೋಬಿಕ್ ವ್ಯಾಯಾಮ ಪ್ರದರ್ಶನ ವಿಭಿನ್ನ ಮಾದರಿಯಲ್ಲಿ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ನೆರವೇರಿತು. 

ರೋಟರಿ ಸಹಯೋಗದಲ್ಲಿ ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘ ಕೊಡುಗೆಯಾಗಿ ನೀಡಿದ ಪ್ಲೇ ಗ್ರೌಂಡ್‌ ವಸ್ತುಗಳ ಉಪಯೋಗಕ್ಕೆ ಮಾಜಿ ಸಚಿವ ರೈ ಚಾಲನೆ ನೀಡಿದರು. 


ಅತಿಥಿಗಳಾಗಿ ದತ್ತು ಸ್ವೀಕಾರ ಸಮಿತಿಯ ಗೌರವ ಸಲಹೆಗಾರರಾದ ಚಂದ್ರಪ್ರಕಾಶ್ ಶೆಟ್ಟಿ, ಗ್ರಾಮ ಪಂಚಾಯತ್ ಕಳ್ಳಿಗೆ ಇದರ ಉಪಾಧ್ಯಕ್ಷರಾದ ವಾರಿಜ, ಗ್ರಾಮ ಪಂಚಾಯತ್ ಕಳ್ಳಿಗೆ ಸದಸ್ಯರಾದ ರವಿರಾಜ್ ಜೈನ್, ರತ್ನಾವತಿ, ತುಂಬೆ ಕ್ಲಸ್ಟರ್ ಸಿ.ಆರ್.ಪಿ. ರಮೇಶ್, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಜೇಸಿ ಸುರೇಶ್ ಕುಮಾರ್ ಬಿ ನಾವೂರು ವಕೀಲರು, ರೋಟರಿ ಕ್ಲಬ್ ಬಿಸಿ ರೋಡ್ ಅಧ್ಯಕ್ಷರಾದ ದಿವಾಕರ್ ಶೆಟ್ಟಿ, ದತ್ತು ಸ್ವೀಕಾರ ಸಮಿತಿ ಅಧ್ಯಕ್ಷರಾದ ಮಧುಸೂದನ್ ಶೆಣೈ, ನಿಯಾಝ್‌ ತಲಪಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯೋಗಿಶ ದರಿಬಾಗಿಲು, ಕೋಶಾಧಿಕಾರಿ ಪ್ರಶಾಂತ್‌ ಮುಂಡಾಜೆ ಉಪಸ್ಥಿತರಿದ್ದರು.

ವಿಶೇಷ ಆಹ್ವಾನಿತರಾಗಿ ಅನಿಲ್ ಪಂಡಿತ್, ಜ್ಯೋತಿಷ್ಯರು, ಮೋಹನ್

ದಾಸ್ ರೈ ಪೆತ್ತಮುಗೇರು, ದಿನೇಶ್ ರೈ ಪೆತ್ರಮುಗೇರು, ಸುರೇಶ್ ರೈ, ಪೆತ್ತಮುಗೇರು, ಶಶಿಧರ ಬ್ರಹ್ಮರಕೂಟ್ಟು, ಶಶಿಪ್ರಭಾ ಗುತ್ತಿನಹಿತ್ತಿಲು, ವಾಣಿ ಪೆರಿಯೋಡಿ ಪೂವಪ್ಪ ಮೇಸ್ತ್ರಿ ವಳವೂರು, ಹಮೀದ್, ಬ್ರಹ್ಮರಕೂಟ್ಲು, ಸಂಜೀವ ದರಿಬಾಗಿಲು, ಆಕ್ಟರ್ ಅಲಿ, ಶಿಕ್ಷಕರು, ಟಿ. ಇದಿನಬ್ಬ ತಲಪಾಡಿ, ಕೆ.ಎಸ್.ಆರ್.ಟಿ.ಸಿ., ಕುಸುಮ ವಿಶ್ವನಾಥ ಜಾರಂದಗುಡ್ಡೆ, ಪ್ರಿಯದರ್ಶಿನಿ ದರಿಬಾಗಿಲು, ಸಂತೋಷ್ ಬಂಗೇರ, ಜಗದೀಶ್ ಬಂಗೇರ ಕಂಜೆತ್ತೂರು, ಮನೋಹರ ಕಂಜೆತ್ತೂರು, ಸಂದೇಶ್ ದರಿಬಾಗಿಲು ಮೊದಲಾದ ಗಣ್ಯರು ಉಪಸ್ಥಿತರಿದ್ದರು. 

ಸಭೆಯಲ್ಲಿ 2024-25ನೇ ಸಾಲಿನ ಮುಖ್ಯಮಂತ್ರಿಯವರ ಬಂಗಾರದ ಪದಕ ಪ್ರಶಸ್ತಿ ಪುರಸ್ಕೃತರಾದ ಶಾಲೆಯ ಹಳೆ ವಿದ್ಯಾರ್ಥಿ ಸುಧೀರ್ ಜಾರಂದಗುಡ್ಡೆ, ರೋಟರಿ ಜಿಲ್ಲೆ 3181ರ ಸಮಾಜ ಸೇವಾ ಪ್ರಶಸ್ತಿ ವಿಜೇತರು ಹಾಗೂ ಸ. ಹಿ. ಪ್ರಾ. ಶಾಲೆ ಬ್ರಹ್ಮರಕೂಟ್ಲುವಿನ ಸಹಶಿಕ್ಷಕರಾದ ಭಾರತಿ, 23ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ - ನಾಲ್ಕು ಪದಕಗಳನ್ನು ಗೆದ್ದ ಸಾಧಕಿ ಅಶ್ಲೀಟ್ ಗ್ರೇಡಿಸ್ ಪಾಯಸ್ ಇವರನ್ನು ಸನ್ಮಾನಿಸಲಾಯಿತು.

ಸಭಾಧ್ಯಕ್ಷತೆ ವಹಿಸಿದ ಶಾಲಾ ಎಸ್.ಡಿ.ಎಂ.ಸಿ ಯ ಅಧ್ಯಕ್ಷರಾದ ಉದಯ ಕುಮಾರ್ ಜ್ಯೋತಿಗುಡ್ಡೆ ಇವರು ಮಾತನಾಡಿ ಶಾಲೆ ಕೇವಲ ಕಟ್ಟಡ ಅಲ್ಲ. ಅಲ್ಲಿಗೆ ಹಳೆ ವಿದ್ಯಾರ್ಥಿಗಳು ತಮ್ಮ ಮಕ್ಕಳನ್ನು ಕಳಿಸಿದರಷ್ಟೆ ಶಾಲೆ ಉಳಿಯಲು ಸಾಧ್ಯ. ಕಲಿಕೆಯಲ್ಲಿ ಕಲಿಸುವಿಕೆಯಲ್ಲಿ ಈಗಾಗಲೇ ಸರಕಾರಿ ಶಾಲೆಗಳು ಮುಂಚೂಣಿಯಲ್ಲಿರುವಾಗ ಶಾಲೆಗೆ ಸೇರಿಸಲು ಯಾವುದೆ ಸಂಶಯ ಬೇಕಾಗಿಲ್ಲ. ೧೦೦ರ ಸಂಭ್ರಮಾಚರಣೆ ಇನ್ನಷ್ಟು ಹಿರಿಯ ವಿದ್ಯಾರ್ಥಿಗಳ ಸಹಕಾರದಲ್ಲಿ ಇನ್ನೂ ಅದ್ದೂರಿಯಾಗಿ ನಡೆಯಲಿ ಎಂದು ಹಾರೈಸಿದರು.

ಮುಖ್ಯಶಿಕ್ಷಕಿ ಕಲ್ಯಾಣಿ ಜಿ. ಸ್ವಾಗತಿಸಿದರು. ಶಿಕ್ಷಕಿ ವೇದಾವತಿ ವಂದನಾರ್ಪಣೆ ಸಲ್ಲಿಸಿದರು.

ಅಪರಾಹ್ನ 4ರಿಂದ ಶಾಲಾ ವಿದ್ಯಾರ್ಥಿಗಳ ಮನೋರಂಜನಾ ಕಾರ್ಯಕ್ರಮ ನೆರವೇರಿತು. ಸಂಜೆ 6.00ರಿಂದ ಗೀತಾಂಜಲಿ ಆರ್ಕೆಸ್ಟ್ರಾ ಬಳಗ ಬಿ.ಸಿ.ರೋಡ್ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

Leave a Comment