ಬಾಯಾರು : ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ.6 ರಂದು ಬಲಿವಾಡು ಕೂಟ ಸಮಾರಾಧನೆ ಹಾಗೂ ಜ. 7 ರಂದು ಬಾಯಾರು ಬಂಡಿಮಾರು ನೇಮವು ಬಹಳ ವಿಜೃಂಭಣೆಯಿಂದ ಜರಗಲಿದೆ.
ಜ.6 ರಂದು ಮಧ್ಯಾಹ್ನ ಬಲಿವಾಡು ಕೂಟ ಸಮಾರಾಧನೆ ನಡೆಯಲಿದೆ. ರಾತ್ರಿ 9 ಗಂಟೆಯ ಹೊತ್ತಿಗೆ ಮಂಡಲ ಪೂಜೆ ನಡೆಯಲಿದೆ. ನಂತರ 10 ಗಂಟೆಗೆ
ರಂಗಪೂಜೆ ಮತ್ತು ಪ್ರಸಾದ ಭೋಜನ ಆದ ಬಳಿಕ ಭಂಡಾರ ಇಳಿಯಲಿದೆ.
ಜ.7 ರಂದು ಅಪರಾಹ್ನ 3 ಗಂಟೆಗೆ ಶ್ರೀ ಮಲರಾಯಾದಿ ದೈವಗಳ ನೇಮ ಪ್ರಾರಂಭವಾಗಲಿದೆ.














