Coastal Bulletin

ಎರ್ನಾಕುಲಂ : ಕೇರಳದ ವಿವಿಧೆಡೆ ಎನ್ ಐ ಎ ನಡೆಸಿದ ದಾಳಿ ಬಳಿಕ ನಿಷೇಧಿತ ಪಿಎಫ್ ಐ ಸಂಘಟನೆಯ ಓರ್ವ ನಾಯಕನನ್ನು ಬಂಧಿಸಲಾಗಿದೆ. ಬಂಧಿತ ನಾಯಕ ನನ್ನು ಎರ್ನಾಕುಲಂ ಸಮೀಪದ ಎಡಮನಕಾಡ್ ನಿವಾಸಿ ಮುಬಾರಕ್ ಎಂದು ಗುರುತಿಸಲಾಗಿದೆ.

ಮುಬಾರಕ್ ,ಪಿ ಎಫ್ ಐ ಸಂಘಟನೆಯ ಕಾರ್ಯಕರ್ತರಿಗೆ ಈ ಹಿಂದೆ ತರಬೇತಿ‌ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.

ಆರೋಪಿ‌ ಮುಬಾರಕ್ ನನ್ನು ಇಂದು ಎನ್ ಐ

ಎ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಇನ್ನೊಬ್ಬ ಪಿ ಎಫ್ ಐ ನಾಯಕನನ್ನು ಕೂಡ ಎನ್ ಐ ಎ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Leave a Comment