ಭಾರತೀಯ ಜನತಾ ಪಾರ್ಟಿ ಪೈವಳಿಕೆ ಪಂಚಾಯತ್ ನ ಉತ್ತರ ವಲಯ 124 ನೇ ಪೆರ್ವೋಡಿ ಬೂತ್ ಚಿತ್ರ ಮೂಲ ಪರಿಸರದ ಲ್ಲಿ ದೀನ್ ದಯಾಳ್ ಜೀ ಸಂಸ್ಮರಣ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪ್ರವೀಣ್ ರೈ ಪಟ್ಲ ವಹಿಸಿದರು. ಸಭೆಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಉದ್ಘಾಟಸಿ ಮಾತನಾಡಿದರು. ಹಿರಿಯ ನೇತಾರ ಶಿವರಾಮ ಶೆಟ್ಟಿ ಕಲ್ಲಗದ್ದೆ, ಬೂತ್ ಪ್ರಧಾನ ಕಾರ್ಯದರ್ಶಿ ಯತೀಶ್ ಕಲ್ಲಗದ್ದೆ, ಬ್ಲಾಕ್ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜ ಬಲ್ಲಾಳ್, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯೆ ಕಮಲ, ಬಿಜೆಪಿ ಜಿಲ್ಲಾ
ಕಾರ್ಯದರ್ಶಿ ಮಣಿಕಂಠ ರೈ, ಪೈವಳಿಕೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕಿಶೋರ್ ಕುಮಾರ್ ನೈಕ್, ಬಿಜೆಪಿ ಪಂಚಾಯತ್ ಉಪಾಧ್ಯಕ್ಷ ಶ್ರೀಧರ್ ಅಂಗಡಿಮಾರ್ ಮೊದಲಾದವರು ಉಪಸ್ಥಿತ ರಿದ್ದರು. ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸಂತೋಷ್ ಭಂಡಾರಿ ಪಟ್ಲ ವಂದಿಸಿದರು.
ಇತ್ತೀಚಿಗೆ ನಿಧನ ಹೊಂದಿರುವ ಬಿಜೆಪಿ ಹಿರಿಯ ನಾಯಕ ಟಿ ಆರ್ ಕೆ ಭಟ್ ಮತ್ತು ಜ್ಯೋತಿಶ್ ಕಾಸರಗೋಡು ಅವರಿಗೆ ಸಂತಾಪ ಸೂಚಿಸಲಾಯಿತು.














