Coastal Bulletin

ಪಾಲಕ್ಕಾಡ್: ಪಾಲಕ್ಕಾಡ್ ಸಮೀಪದ ಮಾರುತ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ತಂಡವೊಂದು ಭಾನುವಾರ ರಾತ್ರಿ ಸ್ಥಳೀಯ ಸಿಪಿಐ(ಎಂ) ಮುಖಂಡ ಶಾಹಜಾನ್ ಎಂಬವನನ್ನು ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕುನ್ನಂಗಾಡು ನಿವಾಸಿ ಶಾಜಹಾನ್ ಅವರು ಸಿಪಿಐ(ಎಂ)ನ ಸ್ಥಳೀಯ ಸಮಿತಿ ಸದಸ್ಯರಾಗಿದ್ದರು.ಮನೆಯ ಬಳಿ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಉಳಿಸಲಾಗಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಶೀಘ್ರವೇ

ಸಮೀಪದ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿಕೆ ನೀಡಿದ್ದಾರೆ.

ಕೊಲೆಯ ಹಿಂದೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೈವಾಡವಿದೆ ಎಂದು ಸಿಪಿಐ(ಎಂ) ಮುಖಂಡರು ಆರೋಪಿಸಿದ್ದಾರೆ.  ಆದರೆ ಈ ಆರೋಪವನ್ನು ಬಿಜೆಪಿ ಜಿಲ್ಲಾ ಸಮಿತಿ ನಿರಾಕರಿಸಿದೆ.

Leave a Comment