ತಿರುವನಂತಪುರಂ : ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಿದ ಕೇಂದ್ರ ಸರ್ಕಾರ ಬೆನ್ನಲ್ಲೇ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ತೈಲದ ಮೇಲಿನ ಸುಂಕ ಕಡಿತಗೊಳಿಸಲಾಗಿದೆ.ಬೆಲೆ ಇಳಿಸದ ಕೇರಳ ಸರ್ಕಾರ ವಿರುದ್ಧ ಕಾಂಗ್ರೆಸ್, ಬಿಜೆಪಿ ಜನಾಕ್ರೋಶ ವ್ಯಕ್ತವಾಗಿದೆ.
ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ರಾಜ್ಯ ಹಾಕಿರುವ ಸುಂಕ ಕಡಿತಗೊಳಿಸುವ ಪ್ರಯತ್ನಕ್ಕೆ ಕೈಹಾಕಿಲ್ಲ. ಕರ್ನಾಟಕ ಸೇರಿದಂತೆ 8 ರಾಜ್ಯಗಳು ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಸುಂಕ ಕಡಿತಗೊಳಿಸಿದೆ. ಪರಿಣಾಮ ಪೆಟ್ರೋಲ್
ಬೆಲೆ 95 ರೂಪಾಯಿಗೆ ಇಳಿಕೆಯಾಗಿದ್ದರೆ ಡೀಸೆಲ್ ಬೆಲೆ 82ರ ಆಸುಪಾಲಿನಲ್ಲಿರಲಿದೆ. ಆದರೆ ಕೇರಳ ಸರ್ಕಾರ ಹಾಕಿರುವ ಸುಂಕ ಇಳಿಕೆಗೆ ಮುಂದಾಗಿಲ್ಲ. ಇದು ಕೇರಳ ಕಾಂಗ್ರೆಸ್ ಹಾಗೂ ಬಿಜೆಪಿ ಕಣ್ಣು ಕೆಂಪಾಗಿಸಿದೆ.














