ಅಮೃತಸರ: ತಾಲಿಬಾನ್ ಆಡಳಿತದಿಂದ ಬೇಸತ್ತಿರುವ ಅಫ್ಘಾನಿಸ್ತಾನದಲ್ಲಿ ಆಹಾರಕ್ಕೆ ಭಾರೀ ಆಹಾಕಾರವಾಗಿದೆ. ಹಸಿವಿನಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಭಾರತವು ಗೋಧಿ ತುಂಬಿದ 50 ಟ್ರಕ್‌ಗಳನ್ನು ಮಂಗಳವಾರ ಕಳುಹಿಸಿಕೊಟ್ಟಿದೆ.
ಅಫ್ಘಾನಿಸ್ತಾನದ ನಾಗರಿಕರಿಗೆ ಮಾನವೀಯ ನೆರವು ನೀಡುವ ಸಲುವಾಗಿ ಭಾರತವು ಮಂಗಳವಾರ 50,000 ಮೆಟ್ರಿಕ್ ಟನ್ ಗೋಧಿ ತುಂಬಿದ 50 ಟ್ರಕ್‌ಗಳನ್ನು ಕಳುಹಿಸಿದೆ. ಗೋಧಿ ತುಂಬಿದ ಈ ಟ್ರಕ್‌ಗಳು ಪಾಕಿಸ್ತಾನದ ಕಾರವಾನ್ ಅಟ್ಟಾರಿ-ವಾಘಾ ಗಡಿಯ ಮೂಲಕ ಅಫ್ಘಾನಿಸ್ತಾನವನ್ನು ಪ್ರವೇಶಿಸಲಿದೆ.ಮಾನವೀಯ ನೆರವಿಗಾಗಿ ನಾವು ಅಫ್ಘಾನಿಸ್ತಾನಕ್ಕೆ 50,000 ಟನ್ ಗೋಧಿಯನ್ನು ನೀಡುತ್ತಿದ್ದೇವೆ' ಎಂದು ವಿದೇಶಾಂಗ
ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಗೋಧಿ ತುಂಬಿದ 50 ಟ್ರಕ್‌ಗಳ ಮೊದಲ ರವಾನೆಯನ್ನು ಅಫ್ಘಾನಿಸ್ತಾನಕ್ಕೆ ರವಾನಿಸಿದರು.ಅಫ್ಘಾನಿಸ್ತಾನದಲ್ಲಿ ಗೋಧಿಯ ಅಗತ್ಯ ಬಹಳ ಇದೆ ಎಂದು ಕೆಲವರು ಹೇಳಿದ್ದಾರೆ. ಅಲ್ಲಿ ಜನರ ಬಳಿ ಹಣವಿಲ್ಲ ಮತ್ತು ಅವರು ತುಂಬಾ ಬಡವರು. ಸಹಾಯಕ್ಕಾಗಿ ನಾವು ಭಾರತಕ್ಕೆ ಕೃತಜ್ಞರಾಗಿರುತ್ತೇವೆ ಎಂದು ಗೋಧಿ ಸಾಗಿಸಲು ಬಂದ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ.














