ರಿಯಾದ್: ಸೌದಿ ಅರೇಬಿಯಾದಿಂದ (Saudi Arabia) 56,000 ಪಾಕಿಸ್ತಾನಿ ಭಿಕ್ಷುಕರನ್ನು (Pakistani Beggars) ಗಡಿಪಾರು ಮಾಡಲಾಗಿದೆ. ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೂಡ ನೀಡಲಾಗಿದೆ.
ಸೌದಿ ಅರೇಬಿಯಾ ಮಾತ್ರ ಭಿಕ್ಷಾಟನೆ ಆರೋಪದ ಮೇಲೆ 56,000 ಪಾಕಿಸ್ತಾನಿಗಳನ್ನು ಗಡೀಪಾರು ಮಾಡಿದೆ. ಆದರೆ ಯುಎಇ ಹೆಚ್ಚಿನ ಪಾಕಿಸ್ತಾನಿ ನಾಗರಿಕರ ಮೇಲೆ ವೀಸಾ ನಿರ್ಬಂಧಗಳನ್ನು ವಿಧಿಸಿದೆ. ಕೆಲವರು ದೇಶಕ್ಕೆ ಬಂದ ನಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಕಳವಳ ವ್ಯಕ್ತಪಡಿಸಲಾಗಿದೆ.
ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ದತ್ತಾಂಶವು ಸಮಸ್ಯೆಯ ಪ್ರಮಾಣವನ್ನು ತೋರಿಸಿದೆ. 2025 ರಲ್ಲಿ, ಸಂಘಟಿತ ಭಿಕ್ಷಾಟನೆ ಸಿಂಡಿಕೇಟ್‌ಗಳನ್ನು ನಾಶಮಾಡಲು ಮತ್ತು ಅಕ್ರಮ ವಲಸೆಯನ್ನು ತಡೆಯುವ ಪ್ರಯತ್ನದಲ್ಲಿ ಅಧಿಕಾರಿಗಳು ವಿಮಾನ ನಿಲ್ದಾಣಗಳಲ್ಲಿ 66,154 ಪ್ರಯಾಣಿಕರನ್ನು ತಡೆದಿದ್ದಾರೆ.
ಈ ಜಾಲಗಳು
ಪಾಕಿಸ್ತಾನದ ಪ್ರತಿಷ್ಠೆಗೆ ಹಾನಿಯನ್ನುಂಟುಮಾಡುತ್ತಿವೆ ಎಂದು ಎಫ್‌ಐಎ ಮಹಾನಿರ್ದೇಶಕ ರಿಫತ್ ಮುಖ್ತಾರ್ ಹೇಳಿದ್ದಾರೆ. ಈ ಪ್ರವೃತ್ತಿ ಕೇವಲ ಕೊಲ್ಲಿಗೆ ಸೀಮಿತವಾಗಿಲ್ಲ ಎಂದಿದ್ದಾರೆ. ಆಫ್ರಿಕಾ ಮತ್ತು ಯುರೋಪ್‌ಗೆ ಪ್ರಯಾಣ ಬೆಳೆಸುವುದರ ಜೊತೆಗೆ ಕಾಂಬೋಡಿಯಾ ಮತ್ತು ಥೈಲ್ಯಾಂಡ್‌ನಂತಹ ತಾಣಗಳಿಗೆ ಪ್ರವಾಸಿ ವೀಸಾಗಳ ದುರುಪಯೋಗವನ್ನು ಒಳಗೊಂಡಂತೆ ಇದೇ ರೀತಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಸೌದಿ ಅರೇಬಿಯಾ ಈ ವರ್ಷ ಭಿಕ್ಷಾಟನೆ ಆರೋಪದ ಮೇಲೆ 24,000 ಪಾಕಿಸ್ತಾನಿಗಳನ್ನು ಗಡೀಪಾರು ಮಾಡಿದೆ. ದುಬೈ ಸುಮಾರು 6,000 ವ್ಯಕ್ತಿಗಳನ್ನು ವಾಪಸ್ ಕಳುಹಿಸಿದರೆ, ಅಜೆರ್ಬೈಜಾನ್ ಸುಮಾರು 2,500 ಪಾಕಿಸ್ತಾನಿ ಭಿಕ್ಷುಕರನ್ನು ಗಡೀಪಾರು ಮಾಡಿದೆ.














