ದುರ್ಗಾ ಪೂಜಾ ಸಮಯದಲ್ಲಿ ಕೋಮು ಗಲಭೆ ಮೂವರ ಸಾವು ಹಲವರಿಗೆ ಗಾಯ.

Coastal Bulletin
ದುರ್ಗಾ ಪೂಜಾ ಸಮಯದಲ್ಲಿ ಕೋಮು ಗಲಭೆ ಮೂವರ ಸಾವು ಹಲವರಿಗೆ ಗಾಯ.

ಬಾಂಗ್ಲಾದೇಶ: ದುರ್ಗಾ ಪೂಜಾ ಪೆಂಡಲ್ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಹಾಗೂ 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಹಿಂಸಾಚಾರ ನಡೆದ ಪ್ರದೇಶಗಳಲ್ಲಿ ಸರ್ಕಾರ ಅರೆಸೇನಾ ಪಡೆಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.

ಕೊಮಿಲ್ಲಾ ಪಟ್ಟಣದ ನನುವಾರ್ ದಿಗಿ ಸರೋವರದ ಬಳಿ ದುರ್ಗಾ ಪೂಜಾ ಪಂಡಲ್‌ನಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹರಡಿದ ಹಿನ್ನೆಲೆಯಲ್ಲಿ  ಹಿಂಸಾಚಾರ ಭುಗಿಲೆದ್ದಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಪೂಜಾ ಪಂಡಲ್‌ಗಳು ಮತ್ತು ವಿಗ್ರಹಗಳನ್ನು ಕೂಡಾ ಧ್ವಂಸ ಮಾಡಲಾಗಿದೆ.

Leave a Comment