ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಪ್ರಧಾನಿ ಮೋದಿಯಿಂದ ಫೆ.14 ರಂದು ಉದ್ಘಾಟನೆ.

Coastal Bulletin
ಅಬುದಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಪ್ರಧಾನಿ ಮೋದಿಯಿಂದ ಫೆ.14 ರಂದು ಉದ್ಘಾಟನೆ.

ಅಬುಧಾಬಿ, ಯುಎಇ: ಯುನೈಟೆಡ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯವನ್ನು ಪ್ರಧಾನಿ ಮೋದಿ ಅವರು ಫೆಬ್ರವರಿ 14 ರಂದು ಉದ್ಘಾಟಿಸಲಿದ್ದಾರೆ.

ಫೆಬ್ರವರಿ 14 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪಿಎಂ ಮೋದಿ ಮತ್ತು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆಯ ಆರನೇ ಮತ್ತು ಪ್ರಸ್ತುತ ಆಧ್ಯಾತ್ಮಿಕ ಗುರು ಸ್ವಾಮಿ ಮಹಂತ್ ಮಹಾರಾಜ್ ಭಾಗವಹಿಸಲಿದ್ದಾರೆ. ಈಗಾಗಲೇ ಸ್ವಾಮಿ ಮಹಂತ್ ಮಹಾರಾಜ್ ಅವರು ದೇವಾಲಯವನ್ನು ಉದ್ಘಾಟಿಸಲು ಮತ್ತು ವಸ್ತುಗಳನ್ನು ಪರಿಶೀಲಿಸಲು ಅಬುಧಾಬಿಗೆ ತೆರಳಿದ್ದಾರೆ.


ದೇವಾಲಯಕ್ಕೆ ಸಂಬಂಧಿಸಿದಂತೆ ದೇಶದ ಏಳು ಎಮಿರೇಟ್‌ಗಳನ್ನು ಪ್ರತಿನಿಧಿಸುವ ಏಳು ಮಿನಾರ್‌ಗಳನ್ನು ಇದರಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ದೇವಾಲಯವನ್ನು 27 ಎಕರೆಗಳಲ್ಲಿ ನಿರ್ಮಿಸಲಾಗಿದೆ.ದೇವಾಲಯವನ್ನು ನಿರ್ಮಿಸಲು ಉತ್ತರ ರಾಜಸ್ಥಾನದಿಂದ ಅಬುಧಾಬಿಯವರೆಗೆ ಗುಲಾಬಿ ಕಲ್ಲು ಬಳಸಲಾಗಿದೆ. ಈ ಕಾರಣದಿಂದಾಗಿ, ಯುಎಇಯಲ್ಲಿನ ತೀವ್ರ ಶಾಖವು ಈ ದೇವಾಲಯಕ್ಕೆ ಹಾನಿ ಮಾಡುವುದಿಲ್ಲ ಎಂದು ತಿಳಿದು ಬಂದಿದೆ.

ಈ ದೇವಾಲಯವು ಸುಮಾರು 108 ಅಡಿ ಎತ್ತರ ಇದೆ. ಇದರಲ್ಲಿ 40 ಸಾವಿರ ಘನ ಮೀಟರ್ ಅಮೃತಶಿಲೆ ಮತ್ತು 180 ಸಾವಿರ ಘನ ಮೀಟರ್ ಮರಳುಗಲ್ಲುಗಳನ್ನು ಬಳಕೆ ಮಾಡಲಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್, ನಟರಾದ ಸಂಜಯ್ ದತ್ ಮತ್ತು ಅಕ್ಷಯ್ ಕುಮಾರ್ ಸೇರಿದಂತೆ 50,000 ಕ್ಕೂ ಹೆಚ್ಚು ಜನರು ದೇವಾಲಯದ ನಿರ್ಮಾಣದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ದೇವಾಲಯವನ್ನು ನಿರ್ಮಿಸಲು ವೈದಿಕ ವಾಸ್ತುಶೈಲಿಯನ್ನು ಬಳಸಲಾಗಿದೆ. ದೇವಾಲಯವನ್ನು ಪ್ರವೇಶಿಸಿದಾಗ ಗಮನ ಸೆಳೆಯುವ ಮೊದಲ ವಿಷಯವೆಂದರೆ ಏಳು ಎಮಿರೇಟ್ಸ್‌ನ ಮರಳಿನಿಂದ ಮಾಡಿದ ಆಕರ್ಷಕ ದಿಬ್ಬಗಳು. 1997 ರಲ್ಲಿ ಶಾರ್ಜಾದ ಮರುಭೂಮಿಯ ಮಧ್ಯದಲ್ಲಿ ವಾಸಿಸುತ್ತಿರುವಾಗ ಅಬುಧಾಬಿಯಲ್ಲಿ ದೇವಾಲಯವನ್ನು ನಿರ್ಮಿಸಲು ಬಯಸಿದ ಸಂಸ್ಥೆಯ ದಿವಂಗತ ಆಧ್ಯಾತ್ಮಿಕ ನಾಯಕರಾದ ಪರಮಪೂಜ್ಯ ಪ್ರಮುಖ್ ಸ್ವಾಮಿ ಮಹಾರಾಜ್ ಅವರ ದೂರದೃಷ್ಟಿಯ ಗೌರವಾರ್ಥವಾಗಿ ಇದನ್ನು ಸ್ಥಾಪಿಸಲಾಗಿದೆಯಂತೆ. ಫೆಬ್ರವರಿ 18 ರಿಂದ ಈ ದೇವಾಲಯವನ್ನು ಸಾಮಾನ್ಯ ಜನರಿಗೆ ತೆರೆಯಲಾಗುತ್ತದೆ. ಇತ್ತೀಚೆಗೆ ಈ ದೇವಾಲಯದ ಚಿತ್ರಗಳು ಸಾಕಷ್ಟು ವೈರಲ್​ ಆಗಿದ್ದವು.

Leave a Comment