Coastal Bulletin

ವಾಷಿಂಗ್ಟನ್, ಮೇ 10: ಅಮೆರಿಕದ ಮಾಧ್ಯಮ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿ ಪ್ರಕಟಗೊಂಡಿದ್ದು, ಈ ಸಲ 2022ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ನಾಲ್ವರು ಭಾರತೀಯರಿಗೆ ಲಭಿಸಿದ್ದು‌ ಹೆಮ್ಮೆಯ ವಿಚಾರ.

ಭಾರತದಲ್ಲಿ ಕೋವಿಡ್-19ನ ಚಿತ್ರಣವನ್ನು ಮನಮುಟ್ಟುವಂತೆ ಕ್ಯಾಮೆರಾದಲ್ಲಿ ಸೆರೆಹಿಡಿದದ್ದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ ವಿಡಿಯೋಜರ್ನಲಿಸ್ಟ್‌ಗಳಿಗೆ ಈ ಸಾಲಿನ ಪ್ರಶಸ್ತಿ ಸಿಕ್ಕಿದೆ. ಈ ತಂಡದಲ್ಲಿ ದಾನಿಶ್ ಸಿದ್ದಿಕಿ ಜೊತೆಗೆ ಅದ್ನಾನ್ ಅಬಿದಿ, ಸಾನ್ನಾ ಇರ್ಷದ್ ಮಟ್ಟೂ ಮತ್ತು ಅಮಿತ್ ದಾವೆ ಕೂಡ ಇದ್ದಾರೆ.

ಈ ವರ್ಷ ತನಿಖಾ ವರದಿ ವಿಭಾಗದಲ್ಲಿ ಟಂಪಾ ಬೇ ಟೈಮ್ಸ್  ಪತ್ರಿಕೆಯ ಮೂವರು ಪತ್ರಕರ್ತರಿಗೆ ಪುಲಿಟ್ಜರ್ ಪ್ರಶಸ್ತಿ ಬಂದಿದೆ. ಫ್ಲೋರಿಡಾ ರಾಜ್ಯದ ಬ್ಯಾಟರಿ ಸಂಸ್ಕರಣೆ ಘಟಕದೊಳಗೆ ವಿಷಯುಕ್ತ ವಾತಾವರಣ ಇರುವುದರ ಕುರಿತು ಈ ಮೂವರು ಸರಣಿ ತನಿಖಾ ವರದಿಗಳನ್ನು ಬರೆದು ಪ್ರಕಟಿಸಿದ್ದರು.

ಬ್ರೇಕಿಂಗ್

ನ್ಯೂಸ್ ವರದಿಯಲ್ಲಿ ಮಿಯಾಮಿ ಹೆರಾಲ್ಡ್ ಪತ್ರಿಕೆಯ ಸಿಬ್ಬಂದಿಗೆ ಪುಲಿಟ್ಜರ್ ಪ್ರಶಸ್ತಿ ಸಿಕ್ಕಿದೆ. ಫ್ಲೋರಿಡಾದ ಸೀಸೈಡ್ ಅಪಾರ್ಟ್ಮೆಂಟ್ ಟವರ್‌ಗಳು ಕುಸಿದ ಘಟನೆಯನ್ನು ಇವರು ಬಹಳ ಚೆನ್ನಾಗಿ ಪ್ರಕಟಿಸಿದ್ದಾರೆ.

ವಿವರಣಾತ್ಮಕ ವರದಿಗಾರಿಕೆ, ಸ್ಥಳೀಯ ವರದಿಗಾರಿಕೆ, ರಾಷ್ಟ್ರೀಯ ವರದಿಗಾರಿಕೆ, ಅಂತರರಾಷ್ಟ್ರೀಯ ವರದಿಗಾರಿಕೆ, ವಿಶೇಷ ಬರಹ, ಕಾಮೆಂಟರಿ, ಸಂಪಾದಕೀಯ ಬರಹ, ಧ್ವನಿ ವರದಿಗಾರಿಕೆ ಮೊದಲಾದ ಪತ್ರಿಕೋದ್ಯಮ ವಿಭಾಗದಲ್ಲಿ ಪುಲಿಟ್ಜರ್ ಪ್ರಶಸ್ತಿಗಳನ್ನು ಕೊಡಲಾಗಿದೆ. ಇದರ ಜೊತೆಗೆ ಸಾಹಿತ್ಯ, ಸಂಗೀತ ವಿಭಾಗದಲ್ಲೂ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಈ ವರ್ಷ ರಷ್ಯಾ ಆಕ್ರಮಣ ವಿದ್ಯಮಾನದಲ್ಲೂ ಎದೆಗುಂದದೆ ಕೆಲಸ ಮಾಡಿದ ಉಕ್ರೇನ್ ಪತ್ರಕರ್ತರಿಗೆ ವಿಶೇಷ ಗೌರವ ನೀಡಲಾಗಿದೆ. 

Leave a Comment