Coastal Bulletin

ಪುತ್ತೂರು: ಅಪ್ರಾಪ್ತ ಬಾಲಕಿಗೆ ಓರ್ವ ಲೈಂಗಿಕ ಕಿರುಕುಳ ನೀಡಿರುವ‌ ಘಟನೆ ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಗದಗ ಮೂಲದ ಅಪ್ರಾಪ್ತ ಬಾಲಕಿ ಬಸ್‌ ನಿಲ್ದಾಣದ ಬಳಿ‌ ನಿಂತಿದ್ದಾಗ, ಸರಳೀಕಟ್ಟೆ ನಿವಾಸಿ ನೌಫಲ್ ಎಂಬ ವ್ಯಕ್ತಿ ಬಾಲಿಕಿಯಬಳಿ ಬಂದು ಹತ್ತು‌ ನಿಮಿಷ ನನ್ನ ಜೊತೆ ಬಾ, ನಿನಗೆ ನಾನು ಹಣ ಕೊಡುತ್ತೇನೆ ಎಂದು

ಆಮಿಷವೊಡ್ಡಿ ಬಾಲಕಿಯನ್ನು ಒತ್ತಾಯಿಸಿದ್ದಾನೆ. ಬಾಲಕಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿ, ಪುತ್ತೂರು ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ನಂತರ ಬಸ್ ನಿಲ್ದಾಣಕ್ಕೆ ಆಗಮಿಸಿದ ಪೋಲಿಸರು‌ ನೌಫಲ್ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

Leave a Comment