Coastal Bulletin

ಮಂಗಳೂರು:ಮಂಗಳೂರಿನ ಕದ್ರಿಯಲ್ಲಿ ಯುನಿಸೆಕ್ಸ್ ಸೆಲೂನ್ ವೊಂದಕ್ಕೆ ನುಗ್ಗಿ ಯುವತಿಯ ಮೈಗೆ ಕೈ ಹಾಕಿ ದರೋಡೆ ಕೃತ್ಯ ಎಸಗಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಅತ್ತಾವರ ನಿವಾಸಿ ಅಬ್ದುಲ್ ದಾವೂದ್ ಬಂಧಿತ ಆರೋಪಿಯಾಗಿದ್ದು ಈತ ಕದ್ರಿ ಯಲ್ಲಿರುವ ಬ್ಲಿಸ್ ಸಿಗ್ನಚರ್ ಯುನಿಸೆಕ್ಸ್ ಸೆಲೂನ್ ಗೆ ನುಗ್ಗಿ ಯುವತಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿ 14 ಸಾವಿರ ರೂ.

ದರೋಡೆ ನಡೆಸಿ ಪರಾರಿಯಾಗಿದ್ದ. ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಯುವತಿಯ ಮೈಗೆ ಕೈ ಹಾಕಿ ಕಿರುಕುಳ ನೀಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಪ್ರಕರಣ ದಾಖಲಿಸಿಕೊಂಡ ಪೋಲಿಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Comment