ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದ್ದ ಕೊಠಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡ ಘಟನೆ ಉಳ್ಳಾಲದ ಬಬ್ಬುಕಟ್ಟೆಯಲ್ಲಿ ನಡೆದಿದೆ.
ಉಳ್ಳಾಲ ಬಬ್ಬುಕಟ್ಟೆಯಲ್ಲಿರುವ ಹೀರಾ ವಿದ್ಯಾಸಂಸ್ಥೆಯ ಬಯಾಲಜಿ ಲ್ಯಾಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಅನಾಹುತ ಸಂಭವಿಸಿದ್ದು ಪರೀಕ್ಷೆ ಗೆ ಬಂದ ವಿಧ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ
ಲ್ಯಾಬ್ ಒಳಗಿದ್ದ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಉಪಕರಣಗಳು ಸುಟ್ಟು ಕರಕಲಾಗಿವೆ.ಪರೀಕ್ಷೆಗೆ ಬಂದಿದ್ದ 208 ವಿದ್ಯಾರ್ಥಿಗಳನ್ನು ಪಕ್ಕದ ಕಾಲೇಜಿನ ಕಟ್ಟಡಕ್ಕೆ ಸ್ಥಳಾಂತರಿಸಿ ಬೆಂಕಿ ನಂದಿಸಿದ್ದಾರೆ.
















