Coastal Bulletin

ಚೆನ್ನಾಗಿಯೇ ದುಡಿಯುತ್ತಿರುವ ರಶ್ಮಿಕಾ ಮಂದಣ್ಣ ತಮ್ಮ ಹಣಕಾಸು ವ್ಯವಹಾರ, ಸಿನಿಮಾ ಒಪ್ಪಂದಗಳು, ಜಾಹೀರಾತು ಒಪ್ಪಂದಗಳು ಇನ್ನಿತರೆಗಳನ್ನು ನೋಡಿಕೊಳ್ಳಲು ಮ್ಯಾನೇಜರ್ ಒಬ್ಬರನ್ನು ನೇಮಿಸಿಕೊಂಡಿದ್ದಾರೆ. ಆದರೆ ಆ ಮ್ಯಾನೇಜರ್ ರಶ್ಮಿಕಾಗೆ ಮೋಸ ಮಾಡಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಹೆಚ್ಚು ಹೆಚ್ಚು ಸಿನಿಮಾ ಅವಕಾಶಗಳು ರಶ್ಮಿಕಾ ಮಂದಣ್ಣಗೆ ಬರಲು ಆರಂಭಿಸಿದಾಗ ರಶ್ಮಿಕಾ, ಮ್ಯಾನೇಜರ್ ಒಬ್ಬನನ್ನು ನೇಮಿಸಿಕೊಂಡಿದ್ದರು. ಕೆಲ ವರ್ಷ ಚೆನ್ನಾಗಿಯೇ ಕೆಲಸ ಮಾಡಿದ್ದ ಮ್ಯಾನೇಜರ್ ಈಗ ತನ್ನ ಮಾಲಕಿಗೆ ಮೋಸ ಮಾಡಿ ದೊಡ್ಡ ಮೊತ್ತದ ಹಣವನ್ನು ಲಪಟಾಯಿಸಿದ್ದಾನೆ. ರಶ್ಮಿಕಾ ಮಂದಣ್ಣಗೆ ಸೇರಿದ ಸುಮಾರು 80 ಲಕ್ಷ ಮೊತ್ತವನ್ನು ಮ್ಯಾನೇಜರ್ ಲಪಟಾಯಿಸಿದ್ದಾನೆ ಎನ್ನಲಾಗುತ್ತಿದೆ.

ರಶ್ಮಿಕಾರ ಗಮನಕ್ಕೆ ಬಾರದೆ ಅವರಿಗೆ ಸೇರಬೇಕಾಗಿದ್ದ ದೊಡ್ಡ ಮೊತ್ತದ ಹಣವನ್ನು ಮ್ಯಾನೇಜರ್ ತನ್ನ ಖಾತೆಗೆ ಹಾಕಿಕೊಂಡಿದ್ದನಂತೆ.

ಈ ವಿಷಯ ತಿಳಿಯುತ್ತಿದ್ದಂತೆ ರಶ್ಮಿಕಾ ಮಂದಣ್ಣ ಮ್ಯಾನೇಜರ್ ಅನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಆದರೆ ಈ ಬಗ್ಗೆ ದೂರು ನೀಡಿರುವ ಕುರಿತು ವರದಿಯಾಗಿಲ್ಲ. ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಕೆಲವು ಉದ್ಯಮಗಳಲ್ಲಿಯೂ ರಶ್ಮಿಕಾ ಹಣ ತೊಡಗಿಸಿದ್ದಾರೆ. ರಶ್ಮಿಕಾರ ತಂದೆ ರಶ್ಮಿಕಾರ ಕೆಲವು ಬ್ಯುಸಿನೆಸ್​ಗಳನ್ನು ನೋಡಿಕೊಳ್ಳುತ್ತಾರೆ. ರಶ್ಮಿಕಾರ ಸಂಭಾವನೆ ಹಾಗೂ ಕೆಲವು ಬ್ರ್ಯಾಂಡ್ ಒಪ್ಪಂದಗಳನ್ನು ಮ್ಯಾನೇಜರ್ ನೋಡಿಕೊಳ್ಳುತ್ತಿದ್ದರಂತೆ ಎಂದು ತಿಳಿದು ಬಂದಿದೆ.

Leave a Comment