Coastal Bulletin

ತಿರುವನಂತಪುರ :ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ 18 ವರ್ಷಕ್ಕೇ ಆರು ತಿಂಗಳ ಮಗುವಿನೊಂದಿಗೆ ಗಂಡನಿಂದ ಪರಿತ್ಯಜಿಸಲ್ಪಟ್ಟು, ಜೀವನೋಪಾಯಕ್ಕಾಗಿ ಲಿಂಬೆ ಶರಬತ್ತು, ಐಸ್ ಕ್ರೀಂ ಮಾರುತ್ತಿದ್ದ ಯುವತಿ ಈಗ ಕೇರಳ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿರುವ ಅನೀ ಶಿವಾ ಎಂಬ ಯುವತಿಯ ಸ್ಫೂರ್ತಿದಾಯಕ ಸುದ್ದಿ.

ಕಷ್ಟಗಳು, ಸವಾಲುಗಳು ಪ್ರತಿಯೊಬ್ಬರಿಗೂ ಇರುತ್ತವೆ. ಈ ಎಲ್ಲಾ ಕಷ್ಟ, ಸವಾಲುಗಳನ್ನು ಮೆಟ್ಟಿ ನಿಂತು ಮುನ್ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಆದರೆ, ಕೆಲವರು ಸಣ್ಣ ಸಣ್ಣ ಸವಾಲುಗಳಿಗೂ ಧೃತಿಗೆಡುತ್ತಾರೆ. ಕೆಲವರು ಇದೇ ಭಯದಲ್ಲಿ ಬದುಕಿನ ಯಾತ್ರೆಯನ್ನೇ

ಮುಗಿಸಿಕೊಳ್ಳುವವರಿದ್ದಾರೆ. ಆದರೆ, ಹೀಗೆ ಬದುಕಿನ ಕಷ್ಟಗಳಿಂದ ಬೇಸತ್ತವರು ಈ ಸ್ಟೋರಿ ನೋಡಲೇಬೇಕು.ಈ ಯುವತಿಯ ಸಾಧನೆ ಇವರು ಎದುರಿಸಿದ ಕಷ್ಟ , ಆ ಕಷ್ಟವನ್ನು ಮೆಟ್ಟಿ ನಿಂತು ಸಾಧನೆ ಮಾಡಿರುವ ಪರಿ ನಿಜಕ್ಕೂ ಎಲ್ಲರನ್ನೂ ಬೆಕ್ಕಸಬೆರಗಾಗಿಸುತ್ತವೆ.

Leave a Comment