ಮಧುಮಿತ ಕಡಂಬು

ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ಅದು ಎಲ್ಲರಲ್ಲಿಯೂ ಅಡಕವಾಗಿರುತ್ತದೆ. ಸರಿಯಾದ ವೇದಿಕೆ ಮತ್ತು ಅವಕಾಶ ಸಿಕ್ಕಾಗ ಮಾತ್ರ ಆ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ಹಾಗೆಯೇ ಸಿಕ್ಕ ಪ್ರತಿಯೊಂದು ಅವಕಾಶದಲ್ಲಿ ನೃತ್ಯ, ನಟನೆ ಹಾಗೂ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿ ಜನರ ಮನಗೆದ್ದವರು ಈ ಮಹೇಶ್ ಕುಲಾಲ್ ಕಡೇಶಿವಾಲಯ

ಇವರು ಮೂಲತಃ ಕಡೇಶಿವಾಲಯದ ದಿ.ಈಶ್ವರ ಮೂಲ್ಯ ಮತ್ತು ಸೇಸಮ್ಮ ದಂಪತಿಗಳ ಸುಪುತ್ರ.‌ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವನ್ನು ಕಡೇಶಿವಾಲಯದ ಪೆರ್ಲಾಪು ಸರಕಾರಿ ಶಾಲೆಯಲ್ಲಿ ಪಡೆದು ಮುಂದೆ ಪಿ.ಯು ಶಿಕ್ಷಣವನ್ನು ಮಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಇವರು ಪೂರೈಸಿದ್ದಾರೆ.

ಮುಂದೆ ಬಡತನದಿಂದ ಶಿಕ್ಷಣ ಮಾಡದೆ, ತನ್ನ ಕನಸಾದ

ನೃತ್ಯದತ್ತ ಪಯಣ ಬೆಳೆಸಿದರು. ಹಂತ ಹಂತವಾಗಿ ಡ್ಯಾನ್ಸ್ ನಲ್ಲಿ ಪರಿಣಿತಿ ಹೊಂದಿದ ಇವರು ತನ್ನದೇ ಊರಿನಲ್ಲಿ ಒಂದು ಡ್ಯಾನ್ಸ್ ಗ್ರೂಪ್ ನ್ನು ಶುರುಮಾಡಿದರು. ಆ ಗ್ರೂಪ್ ಗೆ "ಶ್ರೀ ಚಿಂತಾಮಣಿ ಡ್ಯಾನ್ಸ್" ಎಂಬ ಹೆಸರು ಇಟ್ಟು , ತನ್ನೂರಿನಲ್ಲಿ ನೃತ್ಯದಲ್ಲಿ ಆಸಕ್ತಿ ಹೊಂದಿದ ಮಕ್ಕಳನ್ನು ಸೇರಿಸಿಕೊಂಡರು.

Leave a Comment