ಮುಗ್ದ ಕನಸು
ಕನಸ ನೇಯುವಳು ಮುಗ್ದ ಹುಡುಗಿ
ಸುಪ್ತ ಮನಸಿನೊಳಗೆ,
ನನ್ನದೇ ಒಂದು ಪುಟ್ಟ ಅರಮನೆ
ನಾನು, ಪತಿ, ಮಕ್ಕಳು ಅದರೊಳಗೆ !
ಕನಸ ಕಾಣುವಳು ಹುಡುಗಿ
ದಿನವೂ ಸುತ್ತಿ ಬಂದಂತೆ ಅವನ ಜೊತೆ
ಸಿನಿಮಾ,ಪಾರ್ಕು,ದೇವ ಮಂದಿರ.
ಸುಂದರ ನೀಲ ಕಡಲ ತೀರ..
ಹೀಗೆ ಸಾಗುವಳು ಬಹುದೂರ ದೂರ..
ದಿನವ
ಕಳೆಯುವಳು ಹೀಗೆ
ಕನಸ ಕೂಡಿಡುತ ಮನದ ಮೂಲೆಯಲ್ಲಿ
ದಾರಿ ಕಾಯುವಳು ಹುಡುಗನಾಸೆಯಲ್ಲಿ
ಅವನು ಬರುವ ಹಾದಿಗೆ ನಿತ್ಯ
ನೂರು ನೆನಪ ಮಾಲೆಗಳ ಚೆಲ್ಲಿ!
ದಾರಿ ಕಾಯುತ,ಕನಸ ಕಾಣುತ
ಮನಸ ತೀಡುತ ಹೊತ್ತು ಸಂಜೆಯಾಗಲು
ಹಗಲುಗನಸಿನ ಕಣ್ಣ ತೆರೆಯುತ
ದೀಪ ಹಚ್ಚಲು ಗುಡಿಸಲೊಳಗೆ
ಬೆಳಕು ಮೂಡಿತು ಸುತ್ತಲೂ....
✒ಸತೀಶ್ ಕುಲಾಲ್,ನೆತ್ತರಕೆರೆ ದುಬೈ















