Coastal Bulletin

ಬಂಟ್ವಾಳ: ಹಿಂದು ಜಾಗರಣ ವೇದಿಕೆ  ಸುವರ್ಣನಾಡು, ಯುವ ಕೇಸರಿ ಸೇವಾ ಟ್ರಸ್ಟ್ ಸುವರ್ಣನಾಡು ಇದರ ವತಿಯಿಂದ ಸುವರ್ಣನಾಡುನಲ್ಲಿ ನೂತನವಾಗಿ ನಿರ್ಮಿಸಲಾದ  ಛತ್ರಪತಿ ಶಿವಾಜಿ ಬಸ್ ತಂಗುದಾಣ ಲೋಕಾರ್ಪಣೆ ಹಾಗು ಹಿಂದು ಸಾಮ್ರಾಜ್ಯ ದಿನೋತ್ಸವ ಕಾರ್ಯಕ್ರಮ ಜೂ.12ರಂದು ನಡೆಯಿತು.

ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ರಾಧಾಕೃಷ್ಣ ಅಡ್ಯಂತಾಯ ಅವರು ನೂತನ ಬಸ್ ತಂಗುದಾಣವನ್ನು ದೀಪ ಬೆಳಗಿ ಉದ್ಘಾಟಿಸಿದರು.ಬಳಿಕ ಸುವರ್ಣನಾಡು ಶ್ರೀ ದುರ್ಗಾಂಬಿಕ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೌದ್ಧಿಕ್ ನಡೆಸಿದರು.

ಹಿಂದು ಜಾಗರಣ ವೇದಿಕೆ

ಬಂಟ್ವಾಳ ತಾಲೂಕು ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಪಂಜಿಕಲ್ಲು ಗ್ರಾಮ ಪಂಚಾಯತ್‌ ಅಧ್ಯಕ್ಷ  ಸಂಜೀವ ಪೂಜಾರಿ ಪಿಲಿಂಗಾಲು, ಯುವ ಕೇಸರಿ ಸೇವಾ ಟ್ರಸ್ಟ್ ಅಧ್ಯಕ್ಷ ಸುರೇಶ್ ಪೂಜಾರಿ, ಪಂಜಿಕಲ್ಲು ಗ್ರಾಮ ಪಂಚಾಯತ್‌ನ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.  

Leave a Comment