Coastal Bulletin

ಪೆರ್ನಾಜೆ: ಪೆರ್ನಾಜೆ ಶ್ರೀ ಸೀತಾರಾಘವ ಪದವಿಪೂರ್ವ ಕಾಲೇಜಿನಲ್ಲಿ ಜ. 6ರಂದು ಶೈಕ್ಷಣಿಕೋತ್ಸವ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಶಾಲೆಗಳಲ್ಲಿ ಮಹತ್ತರವಾದ ಬದಲಾವಣೆಗಳು ನಡೆಯುತ್ತಿವೆ.

ಪ್ರಧಾನಮಂತ್ರಿಯವರು ಶೈಕ್ಷಣಿಕ ಚಟುವಟಿಕೆಗಾಗಿ ಸುಮಾರು 5 ಕೋಟಿ ರೂ. ಅನುದಾನ ನೀಡಿದ್ದು, ಎಲ್ಲಾ ಶಾಲೆಗಳಿಗೂ ಹೊಸ ಮೆರುಗು ಬರಲಿದೆ ಎಂದ ಅವರು, ದೇವಾಲಯಗಳು ಸಂಸ್ಕೃತಿಯನ್ನು ಕಲಿಸಿದರೆ, ಶಾಲೆಗಳು ಜ್ಞಾನವನ್ನು ಕಲಿಸುವ ಕೆಲಸವನ್ನು ಮಾಡುತ್ತಿವೆ ಎಂದರು.ಕಳೆದ 57 ವರ್ಷಗಳಿಂದ ವಿದ್ಯಾಭ್ಯಾಸ ನೀಡವು ಕಾಯಕದಲ್ಲಿ ಸೀತಾರಾಘವ ಪದವಿಪೂರ್ವ ಕಾಲೇಜು ತೊಡಗಿಸಿಕೊಂಡಿದೆ. ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವ ಮೂಲಕ ಇತಿಹಾಸವನ್ನು ನಿರ್ಮಿಸಿದೆ ಎಂದರು.

ಅಧ್ಯಕ್ಷರು ಶ್ರೀ ಸೀತಾರಾಮ ವಿದ್ಯಾವರ್ಧಕ ಸಂಘ ರಿ ಪೆರ್ನಾಜೆ ಶಂಕರನಾರಾಯಣ ಭಟ್ ಶೈಕ್ಷಣಿಕೋತ್ಸವ ಸಭಾ ಕಾರ್ಯಕ್ರಮದ ಸರ್ವಧ್ಯಕ್ಷತೆಯನ್ನು ವಹಿಸಿದ್ದು ವಿದ್ಯಾರ್ಥಿಗಳ ಬಗ್ಗೆ ಸಂದರ್ಭೋಚಿತವಾಗಿ ಹಿತ ನುಡಿದರು.

ಆಡಳಿತ ಕಾರ್ಯದರ್ಶಿ ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣಪ್ರಸಾದ್ ಕೊಚ್ಚಿ ವಹಿಸಿದ್ದು ಶುಭನುಡಿದರು. ಮುಳ್ಳೇರಿಯ ಹವ್ಯಕ ಮಂಡಲದ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡವು ಸಂಚಾಲಕರಾದ ಅನುಪಮಾ ಎಸ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿವೃತ ಶಿಕ್ಷಕರಾದ ಶ್ರೀ ಕೃಷ್ಣ ಪಿ., ನಾರಾಯಣಿ ಎಸ್., ಗೋಪಾಲಕೃಷ್ಣ ಕೆ.ಆರ್., ಚಂದ್ರಮುಖಿ ಎ. , ಚಿತ್ರವತಿ ಅವರನ್ನು ಸನ್ಮಾನಿಸಲಾಯಿತು. ಪದವಿಪೂರ್ವ

ಕಾಲೇಜಿಗೆ ಅನುದಾನ ನೀಡಿದ ಶಾಸಕ ಸಂಜೀವ ಮಠಂದೂರು ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಕೋಶಾಧಿಕಾರಿಗಳು. ಮಳಿ ಶ್ರೀರಾಮಚಂದ್ರ ಭಟ್ ಧ್ವಜ ವಂದನೆ ನಡೆಸಿದರು. ಶೈಕ್ಷಣಿಕ ಕಾರ್ಯದರ್ಶಿಯರಾದ ಶಿವಶಂಕರ ಭಟ್ ಪುಸ್ತಕ ಪೂಜೆ ನಡೆಸಿದರು ನಿವೃತ ಶಿಕ್ಷಕರಾದ ಪಟ್ಟಾಜೇ ಸುಬ್ರಮಣ್ಯ ಭಟ್ ಗುರು ನಮನ ನಡೆಸಿದರು. ನಿವೃತ ಪ್ರಾಚಾರ್ಯರಾದ ಕೆ ಆರ್ ಗೋಪಾಲಕೃಷ್ಣ ಸಂಸ್ಥಾಪಕರ ಸಂಸ್ಕಾರಣೆ ನಡೆಸಿದರು ನಿರ್ದೇಶಕರಾದ ಸರೋಜಿನಿ ನಾಗಪ್ಪಯ್ಯ ಸ್ವಾಗತ ಮಾಡಿದರು ಮುಖ್ಯೋಪಾಧ್ಯಾಯರಾದ ಸುಜಾತ ವರದಿ ವಾಚಿಸಿದರು ಪ್ರಾಚಾರ್ಯರಾದ ಮಂಟ್ಯಯ್ಯ ಹಿನ್ನೋಟ ಮತ್ತು ಕೊಡುಗೆಗಳ ಸ್ಥಾಪಕರ ಕುರಿತು ನುಡಿದರು ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯ ವಾಗಿ ಜರುಗಿತು. ನಿವೃತ ಶಿಕ್ಷಕರಾದ ಸುಕನ್ಯಾ ,ನಾರಾಯಣಿ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಸುಪ್ರೀತ್ ಎಂಎಸ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ಪಿ ಯವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಕವಾಯತ್ ಪ್ರದರ್ಶನ ನಡೆಯಿತು. ಬಯಲು ಸಿಂಚನ ನೃತ್ಯ ಕಾರ್ಯಕ್ರಮವು ನಿವೃತ ಶಿಕ್ಷಕರಾದ ಸುಕನ್ಯ ರವರ ನೇತೃತ್ವದಲ್ಲಿ ಜರುಗಿತು.

Leave a Comment