ಪಾಣೆಮಂಗಳೂರು:ವಾಹನ ಅಪಘಾತದಲ್ಲಿ ಯುವ ಛಾಯಾಗ್ರಾಹಕ ವಿಧಿವಶ.

Coastal Bulletin
ಪಾಣೆಮಂಗಳೂರು:ವಾಹನ ಅಪಘಾತದಲ್ಲಿ ಯುವ ಛಾಯಾಗ್ರಾಹಕ ವಿಧಿವಶ.

ಬಂಟ್ವಾಳ :ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಶಂಭೂರು ಶೇಡಿಗುರಿ ನಿವಾಸಿ ರಕ್ಷಿತ್ ಶೆಟ್ಟಿ (43) ಎಂದು ಗುರುತಿಸಲಾಗಿದೆ. ಮಾ.13ರಂದು ರಾತ್ರಿ ಪಾಣೆಮಂಗಳೂರು ಸಮೀಪ ಎರಡು ಬೈಕ್‌ಗಳ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಕ್ಷಿತ್ ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಾ.

14 ರಂದು ಕೊನೆಯುಸಿರೆಳೆದಿದ್ದಾರೆ.

ಮೃತರು ಅತ್ಯುತ್ತಮ ವಿಡಿಯೋಗ್ರಾಫರ್ ಹಾಗೂ ಛಾಯಾಗ್ರಾಹಕರಾಗಿದ್ದು, ಬಂಟ್ವಾಳ ಛಾಯಾಗ್ರಾಹಕರ ಸಂಘದ ಸಕ್ರಿಯ ಸದಸ್ಯರಾಗಿದ್ದರು.ತನ್ನ ಮಗಳ ಹತ್ತನೇ ವರ್ಷದ ಹುಟ್ಟುಹಬ್ಬವನ್ನು ಮಾ.15ರಂದು ಆಚರಿಸಲು ತಯಾರಿ ನಡೆಸುತಿದ್ದರು, ತನ್ನ ಸಹೋದರ ರಂಜಿತ್ ವರ್ಷದ ಹಿಂದೆ ಅಪಘಾತದಲ್ಲಿ ಗಾಯಗೊಂಡು ಮಲಗಿದ ಸ್ಥಿತಿಯಲ್ಲೇ ಮನೆಯಲ್ಲಿದ್ದಾರೆ.ಇವರ ಸಾವಿನಿಂದ ಮನೆಯ ಆಧಾರಸ್ತಂಭ ಕಳಚಿ ದಿಕ್ಕು ತೋಚದಂತಾಗಿದೆ.




Leave a Comment