Coastal Bulletin

ಬಿಸಿರೋಡು : ಕೃಷಿ ಇಲಾಖೆ ಬಂಟ್ವಾಳ, ಆತ್ಮ ಯೋಜನೆ ಕಿಸಾನ್ ಗೋಷ್ಠಿ ಯೋಜನೆ ಯಡಿಯಲ್ಲಿ ಕರುಣೇಂದ್ರ ಪೂಜಾರಿ ಕೊಂಬ್ರಬೈಲು ನೇತೃತ್ವದಲ್ಲಿ ಯಂತ್ರ ನಾಟಿಗೆ ಚಾಲನೆ, ಅಡಕೆ ಕೃಷಿಗೆ ಕಲೆ ಚುಕ್ಕಿ ರೋಗ, ಹಳದಿ ರೋಗ ಮಾಹಿತಿ ಶಿಬಿರ ಬಿಸಿರೋಡು ಮೈಯ್ಯರಬೈಲು ಬಾಳೆಹಿತ್ಲು ಎಂಬಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್  ದೇಶದ 70 ಶೇ ದಷ್ಟು ಮಂದಿ ಕೃಷಿ ಅವಲಂಬಿತರಾಗಿದ್ದು, ಅದರಲ್ಲಿ ಜಿಡಿಪಿಗೆ ಕೇವಲ 14 ಶೇ. ಲಭಿಸುತ್ತಿದೆ, ಅದನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿಯವರು ಹಲವು ಯೋಜನೆ ಗಳನ್ನು ರೂಪಿಸುತ್ತಿದ್ದಾರೆ ಎಂದು  ಈ ಸಂದರ್ಭದಲ್ಲಿ ಹೇಳಿದರು..

ಈ ಸಂದರ್ಭದಲ್ಲಿ ವಿಟ್ಲ ಸಿಪಿಸಿಆರ್‌ಐನ ತಾಂತ್ರಿಕ ಅಧಿಕಾರಿ ಪುರಂದರ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಕೊರಗಪ್ಪ, ಪುರಸಭಾ ಸದಸ್ಯ ಹರಿಪ್ರಸಾದ್, ಬಂಟ್ವಾಳ ಸಹಾಯಕ ಕೃಷಿ ಅಽಕಾರಿ

ವೀಣಾ ಕೆ.ಆರ್, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಬೊಲ್ಪು ರೈತ ಉತ್ಪಾದಕ ಸಂಘದ ಅಧ್ಯಕ್ಷ ರಾಜ ಬಂಟ್ವಾಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾದಿಕಾರಿ ಜಯಾನಂದ ಪಿ, ಕೃಷಿಕರಾದ ವಾಸು ಮೂಲ್ಯ ಬಾಳೆಹಿತ್ಲು, ವೆಂಕಟರಾವ್ ಬಾಳೆಹಿತ್ಲು, ಪುರುಷೋತ್ತಮ ಬಾಳೆಹಿತ್ಲು, ನಾಗೇಶ್ ಕುಲಾಲ್ ಬಾಳೆಹಿತ್ಲು, ದೇವಪ್ಪ ಕುಲಾಲ್ ಪಂಜಿಕಲ್ಲು, ಪಾಣೆಮಂಗಳೂರು ಕೃಷಿ ಅಽಕಾರಿ ನಂದನ್ ಶೆಣೈ ಪಿ., ಆತ್ಮ ಯೋಜನೆಯ ಎಟಿಎಂ ಹನುಮಂತ ಕಾಳಗಿ ಮೊದಲಾದವರಿದ್ದರು.

Leave a Comment