ಪುತ್ತೂರು : ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ ವತಿಯಿಂದ ಕಾಂಪ್ಕೊ ಸುವರ್ಣ ಮಹೋತ್ಸವದ ಸಂಭ್ರಮಾಚರಣೆಯು ಫೆ. 11 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣ ತೆಂಕಿಲ , ಪುತ್ತೂರಿನಲ್ಲಿ ನಡೆಯಲಿದೆ.
ಭಾರತ ಸರಕಾರ ಸನ್ಮಾನ್ಯ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಶ್ರೀ ಅಮಿತ್ ಶಾ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂಪ್ಕೊ ನಿಯಮಿತ ಮಂಗಳೂರು ಅಧ್ಯಕ್ಷರು ಶ್ರೀ. ಎ.ಕಿಶೋರ್ ಕುಮಾರ್ ಕೊಡ್ಗಿ ವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಯಿ, ಸನ್ಮಾನ್ಯ ಸಂಪದೀಯ ವ್ಯವಹಾರಗಳ ಸಚಿವರು ಶ್ರೀ ಪ್ರಹ್ಲಾದ್ ಜೋಶಿ, ವಿವೇಕಾನಂದ ವಿದ್ಯಾವರ್ಧಕ
ಸಂಘದ ಅಧ್ಯಕ್ಷರು ಶ್ರೀ. ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಭಾಗವಹಿಸಲಿದ್ದಾರೆ.
ಮಾನ್ಯ ಲೋಕಸಭಾ ಸದಸ್ಯರು ಶ್ರೀ ನಳಿನ್ ಕುಮಾರ್ ಕಟೀಲು ಇವರು ಶುಭಾಶಂಸನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಸುನಿಲ್ ಕುಮಾರ್, ಮಾನ್ಯ ಗೃಹ ಸಚಿವರು ಶ್ರೀ ಅರಗ ಜ್ಞಾನೇಂದ್ರ , ಮಾನ್ಯ ಸಹಕಾರ ಸಚಿವರು ಶ್ರೀ. ಎಸ್.ಡಿ.ಸೋಮಶೇಖರ್, ಹೀಗೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.















