Coastal Bulletin

ಬಂಟ್ವಾಳ :ಸಂತ ಅಂತೋನಿ ಚರ್ಚ್ ಅಲ್ಲಿಪಾದೆ, ಇದರ 5 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಚರ್ಚ್ ಕಟ್ಟಡ ಹಾಗೂ ನೂತನ ಗುರು ನಿವಾಸದ ಉದ್ಘಾಟನೆ ಹಾಗೂ ಆಶೀರ್ವಾಚನ ಸಂಭ್ರಮ ಕಾರ್ಯಕ್ರಮ ಫೆ. 13 ರಂದು ಸೋಮವಾರ ನಡೆಯಲಿದೆ ಎಂದು ಅಲ್ಲಿಪಾದೆ ಚರ್ಚ್ ನ ಧರ್ಮಗುರು ವಂ| ಫಾ| ಫೆಡ್ರಿಕ್ ಮೊಂತೇರೋ ಹೇಳಿದರು.

ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ಆಶೀರ್ವಾದ ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ವಹಿಸಲಿದ್ದಾರೆ. ಶಾಸಕ ರಾಜೇಶ್ ನಾಯ್ಕ್ , ಮಾಜಿ ಸಚಿವ ಬಿ‌.ರಮಾನಾಥ ರೈ ಸಹಿತ ಅನೇಕ ಗಣ್ಯರು ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಅಲ್ಲಿಪಾದೆ ಧರ್ಮಕ್ಷೇತ್ರ ಎಲ್ಲಾ ಕ್ಷೇತ್ರದಲ್ಲಿಯೂ ಪ್ರಗತಿ ಪಥದಲ್ಲಿ ಮುಂದುವರಿದಿದ್ದು, ಶೈಕ್ಷಣಿಕ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ಯನ್ನು ನೀಡುತ್ತಾ ಬಂದಿದೆ ಎಂದು ಅವರು ತಿಳಿಸಿದರು.

ಧರ್ಮಕ್ಷೇತ್ರದಲ್ಲಿ 200 ಕ್ರೈಸ್ತ ಕುಟುಂಬಗಳಿದ್ದು, ಭಕ್ತ ಜನರ ಏರಿಕೆಯಾದಂತೆ ದೇವಾಲದಲ್ಲಿ ಸ್ಥಳಾವಕಾಶದ ಕೊರತೆ ಹಾಗೂ ದೇವಾಲಯ ಹಾಗೂ ಧರ್ಮಗುರುಗಳ ವಾಸದ ಮನೆಯ ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಸರಕಾರ ಹಾಗೂ ಸಹೃದಯರ ಸಹಕಾರದಿಂದ ಕೋಟ್ಯಾಂತರ ರೂ ವೆಚ್ಚದ ಸುಸಜ್ಜಿತ ನವೀಕೃತ ಕಟ್ಟಡದ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಕಟ್ಟಡದ ಉದ್ಘಾಟನೆ ಅಂಗವಾಗಿ ಪೂರ್ವಭಾವಿಯಾಗಿ ಫೆ.12 ರಂದು ಆದಿತ್ಯವಾರ ಸಂಜೆ 3.30 ಕ್ಕೆ ಮೊಡಂಕಾಪು ಚರ್ಚ್ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.

ಅದೇ ದಿನ ಬೆಳಿಗ್ಗೆ ಹಿರಿಯ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.

ಫೆ.14 ರಂದು ಮಂಗಳವಾರ ಧಾರ್ಮಿಕರ ದಿನ ಹಾಗೂ ಸಂಜೆ ಸೌಹಾರ್ದ ಕೂಟ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಲ.ದೇವದಾಸ್ ಕಾಪಿಕಾಡ್ ಅವರ ನಮಸ್ಕಾರ ಮಾಷ್ಟ್ರೆ ತುಳು ಹಾಸ್ಯಮಯ ನಾಟಕ ನಡೆಯಲಿದೆ .

ಫೆ.15 ರಂದು ಸಂತ ಅಂತೋನಿಯವರ ವಾರ್ಷಿಕ ಹಬ್ಬ ನಡೆಯಲಿದೆ. ಫೆ.16 ರಂದು ದಾನಿಗಳ ಹಾಗೂ ಕಾರ್ಮಿಕ ಕಾರ್ಮಿಕರ

ದಿನ, ಫೆ. 17 ರಂದು ಮಕ್ಕಳು ಹಾಗೂ ಯುವ ಜನರ ದಿನ, ಫೆ. 18 ರಂದು ಕ್ರೈಸ್ತ ಕುಟುಂಬಗಳ ದಿನ, ಫೆ. 19 ರಂದು ಸಾಮೂಹಿಕ ಪ್ರಥಮ ಪರಮ ಪ್ರಸಾದ ದಿನ ಕಾರ್ಯಕ್ರಮ ನಡೆಯಲಿದೆ.

ಸಂಜೆ ಕೊಂಕಣಿ ಸಂಗೀತ ಸಾಂಜೆ, ಕೊಂಕಣಿ ಸಂಗೀತ ರಸಮಂಜರಿ, ಕೊಮಿಡಿ ಕಂಪೆನಿ ಶೋ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ನವೀಕೃತ ಇಗರ್ಜಿಯಲ್ಲಿರುವ ವೈಶಿಷ್ಟ್ಯತೆಗಳು:-

1. ನೆಲಮಟ್ಟದಿಂದ ಮೇಲಿನ ಶಿಲುಬೆಯವರೆಗೆ 85 ಅಡಿ ಎತ್ತರವಿರುವ ಇಗರ್ಜಿಯ ಕಟ್ಟಡ.

2. 10 ಆಡಿ ಎತ್ತರವಿರುವ ಸಂತ ಅಂತೋನಿಯವರ ಅನನ್ಯ (Unique) ಪ್ರತಿಮೆ.

3. ಇಗರ್ಜಿಯಲ್ಲಿ ಭಾರತದಲ್ಲೇ ಸೇವೆಸಲ್ಲಿಸಿದ ಹಾಗೂ ಬೇಟಿ ನೀಡಿದ ಸಂತರ ಪ್ರತಿಮೆಗಳು. 4. ವರ್ಣರಂಜಿತ ಗಾಜಿ (Stained glass) ನಲ್ಲಿ ಮೇರಿಮಾತೆಯ ಜಪಸರದ 20 ರಹಸ್ಯಗಳು.

5. ಇಗರ್ಜಿಯ ಒಳಗಡೆ 2 ಪಾರ್ಶದ ಗ್ಯಾಲರಿಗಳಲ್ಲಿ ಪ್ರಾಚೀನ ಶೈಲಿಯ ಮರದಕೆತ್ತನೆ.(ಕಡಚಲ್)ಗಳ ಮಧ್ಯದಲ್ಲಿ ಸಂತ ಅಂತೋನಿಯವರ 13 ಪವಾಡಗಳ ದೃಶ್ಯಗಳು. 6. ಗ್ಯಾಲರಿಗಳ ಎರಡೂ ಪಾರ್ಶ್ವಗಳಲ್ಲಿ ವೃತ್ತಾಕಾರದಲ್ಲಿ ವಿಶಿಷ್ಟ ರೀತಿಯಲ್ಲಿ ಚಿತ್ರಿಸಿದ ಕ್ರಿಸ್ತನ ಶಿಲುಬೆ ಹಾದಿಯ 14 ದೃಶ್ಯಗಳು.

7. ವಿವಿಧ ಸಂಸ್ಕಾರಗಳನ್ನು ಬಿಂಬಿಸುವಂತೆ ಕೆತ್ತಲ್ಪಟ್ಟ ಇಗರ್ಜಿಯ ಮುಂಭಾಗದ ಪ್ರವೇಶ ಬಾಗಿಲು.

8. ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಿದ ಸುಂದರ ದೇವರ ಪೀಠ (ಬಲಿಪೂಜೆ ಪೀಠ),

9. ಇಗರ್ಜಿಯ ಒಳಗಡೆ ಒಂದೇ ಬೃಹತ್‌ ಫ್ಯಾನ್.

10.ಇಗರ್ಜಿಯ ರಸ್ತೆಯ ಇಕ್ಕೆಲಗಳಲ್ಲಿ ಸುಂದರ ಅಲಂಕರಿತ ಗಿಡಗಳು ಮತ್ತು ಸೌರದೀಪಗಳು. 11. ಇಗರ್ಜಿಯ ವಠಾರದಲ್ಲಿ ಹೈಮಾಸ್ಟ್ ದೀಪ ಹಾಗೂ ಸುತ್ತಲೂ ಆವರಣಕ್ಕೆ ಸೌರದೀಪಗಳು.

ಲಾರೆನ್ಸ್ ಡಿ.ಸೋಜ, ಲಿಯೋ ಫರ್ನಾಂಡೀಸ್, ನವೀನ್ ಮೊರಾಸ್, ,ಕಿರಣ್ ನೊರೊನ್ಹಾ, ಪ್ರವೀಣ್ ಪಿಂಟೋ, ಬೆನೆಡಿಕ್ಟ್ ವಾಲ್ಡರ್, ಮೆಲರೊಯಿ ಡಿಸೋಜ, ಮಡ್ತಿನಿ ಸ್ವಿಕೇರ,ಡೆನ್ಜಿಲ್ ನೊರೊನ್ಹಾ ಉಪಸ್ಥಿತರಿದ್ದರು.

Leave a Comment