ಫರಂಗಿಪೇಟೆ :ಶ್ರೀ ಆಂಜನೇಯ ದೇವಸ್ಥಾನ ಬ್ರಹ್ಮ ಕಲಶೋತ್ಸವ ಸಂಭ್ರಮ, ಮಾತೃ ಸಮಾವೇಶ. ಸುಸಂಸ್ಕೃತ, ಸಚ್ಚರಿತ್ರ್ಯವಂತ ತಾಯಿಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ :ಸಾದ್ವಿ ಮಾತಾನಂದಮಯಿ.

Coastal Bulletin
ಫರಂಗಿಪೇಟೆ :ಶ್ರೀ ಆಂಜನೇಯ ದೇವಸ್ಥಾನ ಬ್ರಹ್ಮ ಕಲಶೋತ್ಸವ ಸಂಭ್ರಮ, ಮಾತೃ ಸಮಾವೇಶ. ಸುಸಂಸ್ಕೃತ, ಸಚ್ಚರಿತ್ರ್ಯವಂತ ತಾಯಿಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ :ಸಾದ್ವಿ ಮಾತಾನಂದಮಯಿ.

ಬಂಟ್ವಾಳ :ಸುಸಂಸ್ಕೃತ, ಸಚ್ಚರಿತ್ರ್ಯ ಹೊಂದಿದ ತಾಯಿಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ, ಮಕ್ಕಳನ್ನು ಬಾಲ್ಯದಲ್ಲಿ ತಿದ್ದಿ ಉತ್ತಮ ಸಂಸ್ಕಾರ ಕೊಟ್ಟು ಸನ್ಮಾರ್ಗದಲ್ಲಿ ನಡೆಸುವ ಜವಾಬ್ದಾರಿ ತಾಯಿಯದ್ದು, ಬಾಹ್ಯ ಸೌಂದರ್ಯದೊಂದಿಗೆ ಅಂತರಂಗದ ಸೌಂದರ್ಯವನ್ನು ರೂಡಿಸಿಕೊಂಡು ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಮುಂದಿನ ಪಿಳಿಗೆಗೆ ತುಲುಪಿಸುವ ಕಾರ್ಯ ನಡೆಯಬೇಕಿದೆ ಎಂದರು. ಶ್ರೀ ರಾಮ ನಾಮದಿಂದ ನಮ್ಮಲ್ಲಿರುವ ಅಜ್ಞಾನ,ಪಾಪ, ತಾಪಗಳು ಕರಗಿಹೋಗುತ್ತದೆ, ಹನುಮ ಭಕ್ತಿ ಹಾಗೂ ಶಕ್ತಿಯ ಸ್ವರೂಪ, ನಿಮ್ಮೆಲ್ಲರ ಒಳ್ಳೆಯ ಮನಸ್ಸು ಹಾಗೂ ಭಗವಂತನ ಅನುಗ್ರಹದಿಂದ ಇಲ್ಲಿ ಭವ್ಯ ದೇವಸ್ಥಾನ ನಿರ್ಮಾಣವಾಗಿದೆ ಎಂದು ಗುರುದತ್ತ ಸಂಸ್ಥಾನಮ್ ಒಡಿಯೂರು ಇಲ್ಲಿನ ಪೂಜ್ಯ ಸಾದ್ವಿ ಮಾತಾನಂದಮಯಿ ಹೇಳಿದರು.

ಅವರು ಫರಂಗಿಪೇಟೆಯ ವಿಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಜ.21ರಿಂದ 26ರ ವರೆಗೆ ನಡೆಯುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ 4ನೇ ದಿನದ ಮಾತೃ ಸಮಾವೇಶ ಕಾರ್ಯಕ್ರಮದಲ್ಲಿ ನುಡಿದರು.

ಮುಖ್ಯ ಅತಿಥಿ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ,ಈ ಭೂಮಿಯೂ ಕೂಡ ಹೆಣ್ಣು, ಇಂದು ತಾಯಿಯು ಎಲ್ಲಾ ಕ್ಷೇತ್ರಗಳಲ್ಲಿ ಸಂಘಟನಾತ್ಮಕವಾಗಿ ಸಮರ್ಥವಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಳೆ. ಹಿಂದೂ ಸಂಸ್ಕೃತಿ ಆಚಾರ ವಿಚಾರಗಳಿಂದ ದೇವಸ್ಥಾನಗಳು ಉಳಿದಿದೆ, ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ನಿರಂತರ ಧರ್ಮ ಶಿಕ್ಷಣ ಕಾರ್ಯ ನಡೆಯಲಿ, ಆಡಂಬರವಿಲ್ಲದ ಆತ್ಮಸಾಕ್ಷಿಗೆ ದೇವರ ಅನುಗ್ರಹವಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಪ್ರೇಮಾನಂದ ಶೆಟ್ಟಿ ಮಾತನಾಡಿ,ಮತಾಂದರು ಹಾಗೂ ಬ್ರಿಟೀಶರು ನಮ್ಮನು ಹಲವಾರು ವರುಷ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ದಬ್ಬಾಳಿಕೆ ನಡೆಸಿದರೂ ನಮ್ಮ ಪೂರ್ವಜರ ಮಾರ್ಗದರ್ಶನ,ಸಾಧು ಸಂತರ ಸಂಸ್ಕಾರದಿಂದ ಇನ್ನೂ ಹಿಂದೂ ಧರ್ಮವು ಗಟ್ಟಿಯಾಗಿ ಬೆಳೆದಿದೆ ಎಂದರು. ನಾವು ಇತರರಿಗಾಗಿ ಬದುಕಬೇಕು, ದೇವಸ್ಥಾನವು ನಮಗೆ ಸಹನೆಯನ್ನು ಕಲಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು

ಶ್ರೀ ಅಂಜನಾದೇವಿ ಮಾತೃ ಮಂಡಳಿಯ ಅಧ್ಯಕ್ಷೆ ಕವಿತಾ ದೇವದಾಸ ಅರ್ಕುಳ ವಹಿಸಿ, ಮುಂದಿನ ದಿನಗಳಲ್ಲಿಯೂ ದೇವಸ್ಥಾನದ ಹಾಗೂ ಸಮಾಜದ ಒಳಿತಿಗಾಗಿ ಮಾತೃ ಮಂಡಳಿಯು ಕೆಲಸ ಮಾಡಲಿದೆ, ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆ ತಿಳಿಸಿದರು.

ವೇದಿಕೆಯಲ್ಲಿ ಡಾ. ಸುಚಿತ್ರಾ ತುಂಗಾ, ಖ್ಯಾತ ಸ್ತ್ರಿರೋಗ ತಜ್ಞರು, ಮಲ್ಲಿಕಾ ಪಕ್ಕಳ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರು, ವಿಜಯ ಬಿ ಶೆಟ್ಟಿ ಸಾಲೆತ್ತೂರ್, ಮಾಜಿ ಸದಸ್ಯರು ತುಳು ಸಾಹಿತ್ಯ ಅಕಾಡೆಮಿ, ಸಂದ್ಯಾದೀಪ ಸುನಿಲ್, ಉದ್ಯಮಿ ಮಂಗಳೂರು, ಅಂಜನಾದೇವಿ ಮಾತೃ ಮಂಡಳಿಯ ಉಪಾಧ್ಯಕ್ಷರಾದ ನಳಿನಿ ವಿಠ್ಠಲ್ ಆಳ್ವ, ವೇದಾವತಿ ಜಯರಾಮ್, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮುಂದಾಳು ಕೀರ್ತಿಶೇಷ ಕೊಡಮಣ್ಣ್ ಕಾಂತಪ್ಪ ಶೆಟ್ಟಿ ಅವರ ಸ್ಮರಣಾರ್ಥ ಧರ್ಮಪತ್ನಿ ಸುಲೋಚನಾ ಕೆ ಶೆಟ್ಟಿ ಯವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

ಮಾತೃ ಸಮಿತಿಯ ಸಂಚಾಲಕಿ ಜಯಶ್ರೀ ಕರ್ಕೇರ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಯೋಗೀತಾ ಉಮೇಶ್ ಧನ್ಯವಾದವಿತ್ತರು, ಡಾ. ಪ್ರಿಯಾ ಹರೀಶ ಕಾರ್ಯಕ್ರಮ ನಿರೂಪಿಸಿದರು.

Leave a Comment