ಜ್ಯೋತಿಗುಡ್ಡೆ: ತರಿಕಿಟ ಕಲಾ ಕಮ್ಮಟ (ರಿ)ಅಶ್ರಯ ದಲ್ಲಿ ಮಕ್ಕಳ ಬೇಸಿಗೆ ಶಿಬಿರ "ಪಿಂಗಾರ" ಪರಿಸರವನ್ನು ಪ್ರೀತಿಸಲು ಕಲಿಯೋಣ: ಡಾ ದೀಪ್ತಿ ಅಮೀನ್.

Coastal Bulletin
ಜ್ಯೋತಿಗುಡ್ಡೆ: ತರಿಕಿಟ ಕಲಾ ಕಮ್ಮಟ (ರಿ)ಅಶ್ರಯ ದಲ್ಲಿ ಮಕ್ಕಳ ಬೇಸಿಗೆ ಶಿಬಿರ "ಪಿಂಗಾರ" ಪರಿಸರವನ್ನು ಪ್ರೀತಿಸಲು ಕಲಿಯೋಣ: ಡಾ ದೀಪ್ತಿ ಅಮೀನ್.

ಬಂಟ್ವಾಳ :ಮಕ್ಕಳು ಖುಷಿಯಾಗಿದ್ದಾಗ ಸೃಜನಶೀಲರಾಗಿ ಕ್ರಿಯಾಶೀಲರಾಗಿರಲು ಸಾಧ್ಯ. ಅದಕ್ಕಾಗಿ ನಡೆಯುವ ಮಕ್ಕಳ ಶಿಬಿರಗಳು ಮಕ್ಕಳ ಈ ತುರ್ತನ್ನು ಪೂರ್ಣಗೊಳಿಸುತ್ತದೆ. ಎಂದು ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ ದೀಪ್ತಿ ಅಮೀನ್ ಅಭಿಪ್ರಾಯಪಟ್ಟರು.

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾ ಭವನದಲ್ಲಿ ಏಪ್ರಿಲ್ 11ರಿಂದ 13ರವರೆಗೆ ತರಿಕಿಟ ಕಲಾ ಕಮ್ಮಟ (ರಿ) ಜ್ಯೋತಿಗುಡ್ಡೆ ಆಯೋಜಿಸಿದ ಮಕ್ಕಳ ಬೇಸಿಗೆ ಶಿಬಿರ ಪಿಂಗಾರದಲ್ಲಿ ಆಸುಪಾಸಿನ ಸುಮಾರು 60ಕ್ಕೂ ಹೆಚ್ಚಿನ ಮಕ್ಕಳು ಪಾಲ್ಗೊಂಡರು. ಮಕ್ಕಳು ತಮ್ಮ ಬಣ್ಣದ ಹೆಬ್ಬೆಟ್ಟು ಹಚ್ಚುವ ಮೂಲಕ ಶಿಬಿರಕ್ಕೆ ಅಪೂರ್ವ ಚಾಲನೆ ನೀಡಿದರು. ಹಾಡು, ಕಥೆ , ಕವನ, ಸಂಗೀತ ಪರಿಕರಗಳ ಜೊತೆ ಆಟ, ಅಭಿನಯ ಗೀತೆ, ವಿಜ್ಞಾನ ಗೀತೆ, ಮಣ್ಣಿನ ಆಕೃತಿ ರಚನೆ, ಪರಿಸರ ವೀಕ್ಷಣೆ, ಮರಗಿಡಗಳ ಪರಿಚಯ, ಪಕ್ಷಿ ಪ್ರಪಂಚ ಪರಿಚಯ ಸೇರಿದಂತೆ

ಸೃಜನಾತ್ಮಕ ಚಟುವಟಿಕೆಗಳು ಮಕ್ಕಳ ಮನಸುಗಳನ್ನು ಅರಳಿಸಿದವು. ಸೇರಿದ ಸುಮಾರು 60ಕ್ಕೂ ಹೆಚ್ಚಿನ ಮಕ್ಕಳ ಮನಸನ್ನು ಮುದಗೊಳಿಸಿತು. 

ಸಂಪನ್ಮೂಲ ವ್ಯಕ್ತಿಗಳಾಗಿ, ಕು.ಲಾವಣ್ಯ ಜ್ಯೋತಿಗುಡ್ಡೆ, ದೀಪ್ತಿ ಪೆರ್ಲಾಪ್‌, ರಕ್ಷಿತ್ ಬಜಾಲ್, ವಿಶ್ವಜ್ಞ ಆಚಾರ್ಯ ಕಕ್ಕೆಪದವು, ಡಾ ದೀಪ್ತಿ ಅಮೀನ್ ಉಡುಪಿ, ಜೀವನ್ ಮೈಸೂರು, ನೇಹಾ ಕಂಜೆತ್ತೂರು, ಅನಿರುದ್ಧ ಬಿ ಸಿ ರೋಡ್, ವಾಲ್ಮೀಕ್ ಬಿಕರ್ನಕಟ್ಟೆ, ಅಕ್ಬರ್‌ ಅಲಿ ದೇವಂದಬೆಟ್ಟು, ಚೈತ್ರ ಪೆರಿಯೋಡಿ, ಶ್ವೇತಾ ಜ್ಯೋತಿಗುಡ್ಡೆ. ಮಲ್ಲಿಕಾ ಎಂ ಜ್ಯೋತಿಗುಡ್ಡೆ, ಉದಯ ಕುಮಾರ್‌ ಜ್ಯೋತಿಗುಡ್ಡೆ,ಶಿಬಿರ ನಡೆಸಿಕೊಟ್ಟರು.

ತರಿಕಿಟ ಕಲಾ ಕಮ್ಮಟ (ರಿ) ಆಯೋಜಿಸಿದ ಈ ಪಿಂಗಾರಕ್ಕೆ ಊರ ಅನೇಕರ ಧನ ಸಹಕಾರ ನೀಡಿದರು. .

Leave a Comment