ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಅಶ್ರಯದಲ್ಲಿ ಸೇವಾಂಜಲಿ ಭರತನಾಟ್ಯ ತರಗತಿಯ ವಾರ್ಷಿಕ ಸಂಭ್ರಮವು ಎ 13ರಂದು ರಂದು ಆದಿತ್ಯವಾರ ಸೇವಾಂಜಲಿ ಸಭಾಗೃಹದಲ್ಲಿ ಜರಗಿತು.
ತುಂಬೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಕವಿತಾ ದೇವದಾಸ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ
ಕೃಷ್ಣ ಕುಮಾರ ಪೂಂಜಾ , ಭರತನಾಟ್ಯ ಗುರುಗಳಾದ ಮಂಜುಳಾ ಸುಬ್ರಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭರತನಾಟ್ಯ ತರಗತಿಯ ವಿದ್ಯಾರ್ಥಿಗಳು ಸಂಭ್ರಮ ದಿಂದ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು ಸೇವಾಂಜಲಿಯ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.














