ಉರ್ವಸ್ಟೋರ್‌:ಕುಲಾಲ ಪ್ರತಿಷ್ಠಾನದ ಅಶ್ರಯದಲ್ಲಿ 'ಕುಲಾಲ ಪರ್ಬ' ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ಎಲ್ಲರೊಂದಿಗೂ ಪ್ರೀತಿ, ಬಾಂಧವ್ಯದಿಂದ ಬೆರೆತು ಸಮಾಜದಲ್ಲಿ ಮುನ್ನಡೆಯೋಣ: ಮಾಣಿಲ ಶ್ರೀ

Coastal Bulletin
ಉರ್ವಸ್ಟೋರ್‌:ಕುಲಾಲ ಪ್ರತಿಷ್ಠಾನದ ಅಶ್ರಯದಲ್ಲಿ 'ಕುಲಾಲ ಪರ್ಬ' ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ಎಲ್ಲರೊಂದಿಗೂ ಪ್ರೀತಿ, ಬಾಂಧವ್ಯದಿಂದ ಬೆರೆತು ಸಮಾಜದಲ್ಲಿ ಮುನ್ನಡೆಯೋಣ: ಮಾಣಿಲ ಶ್ರೀ

ಮಂಗಳೂರು :ಕುಲಾಲ ಪ್ರತಿಷ್ಠಾನ ಮಂಗಳೂರು ವತಿಯಿಂದ ಮಂಗಳೂರಿನ ಅಂಬೇಡ್ಕರ್ ಭವನದ ದಿ| ಸುಮಿತ್ರ ರಾಜು ಸಾಲ್ಯಾನ್ ವೇದಿಕೆಯಲ್ಲಿ ಎ 13ರಂದು ರವಿವಾರ ಜರಗಿದ 'ಕುಲಾಲ ಪರ್ಬ' ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಮಾಣಿಲ ಶ್ರೀ ಧಾಮದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ,ಕುಲಾಲ ಸಮುದಾಯ ಒಗ್ಗಟ್ಟಿನಿಂದ ಸಮಾಜದಲ್ಲಿ ಮುನ್ನಡೆಯಬೇಕು, ಒಗ್ಗಟ್ಟು ಕಳೆದುಕೊಂಡರೆ ನಮ್ಮತನವನ್ನು ಕಳೆದುಕೊಂಡಂತೆ, ಎಲ್ಲರೊಂದಿಗೂ ಪ್ರೀತಿ, ಬಾಂಧವ್ಯ ಮತ್ತು ಏಕತೆಯಿಂದ ಬೆರೆತು ಸಮಾಜದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕುಲಾಲ್ ಮಂಗಳಾದೇವಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಮಾಜಿ ಅಧ್ಯಕ್ಷ ಎಂ.ಪಿ. ಬಂಗೇರ, ನ್ಯಾಯವಾದಿ, ಕುಲಶೇಖರ ಶ್ರೀ ಧರ್ಮಶಾಸ್ತ್ರ ಮಂದಿರ ಟ್ರಸ್ಟ್‌ನ ಅಧ್ಯಕ್ಷ ರಾಮಪ್ರಸಾದ್ ಎಸ್,, ಬೆಳ್ಳಣ್ ಕುಂಭ ನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಕುಶ ಆರ್. ಮೂಲ್ಯ, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರಧಾನ ಆರ್ಚಕ ಶಿವಾನಂದ ಕನಡ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಅಣ್ಣಯ್ಯ ಕುಲಾಲ್, ಓಲ್ಡ್ಕೆಂಟ್ ರೋಡ್ ಶ್ರೀ ದೇವಿ

ದೇವಸ್ಥಾನದ ಅಧ್ಯಕ್ಷ ಸದಾಶಿವ ಕುಲಾಲ್ ಅತ್ತಾವರ, ಕುಲಾಲ ಕುಂಬಾರರ ಯುವ ವೇದಿಕೆಯ ರಾಜ್ಯಾಧ್ಯಕ್ಷ ಗಂಗಾಧರ ಬಂಜನ್, ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಸುರತ್ಕಲ್ ಸ್ವರ್ಣಕುಂಭ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್, ಶ್ರೀ ವೀರ ನಾರಾಯಣ ದೇವಸ್ಥಾನದ ಶ್ರೀ ವೀರನಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಕಿರಣ್ ಕುಮಾರ್ ಅಟ್ಲುರು, ಸುನಿಲ್ ಸಾಲ್ಯಾನ್, ದೇವಕಿ ಸಾಲ್ಯಾನ್, ಕುಲಾಲ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಬಿ. ಸುರೇಶ್ ಕುಲಾಲ್, ಟ್ರಸ್ಟಿಗಳಾದ ಮಾಸ್ಟರ್ ಬಿ.ಸೀತಾರಾಮ ಕುಲಾಲ್, ಬಿ. ನಾಗೇಶ್ ಕುಲಾಲ್, ಬಿ.ದಿನೇಶ್ ಕುಲಾಲ್, ಬಿ. ಪ್ರೇಮಾನಂದ ಕುಲಾಲ್ ಉಪಸ್ಥಿತರಿದ್ದರು.

ಟ್ರಸ್ಟಿ ನ್ಯಾಯವಾದಿ ಲಕ್ಷ್ಮಣ್ ಕುಂದರ್ ಸ್ವಾಗತಿಸಿದರು. ಕುಲಾಲ ಸಮಾಜದ 25 ಸಾಧಕರಿಗೆ 'ಕುಲಾಲ ಸಾಧಕ ಪ್ರಶಸ್ತಿ' ನೀಡಿ ಗೌರವಿಸಲಾಯಿತು ಹಾಗೂ ಅಶಕ್ತರಿಗೆ ಆರ್ಥಿಕ ಸಹಾಯ ನೀಡಲಾಯಿತು. ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆದವು. ನವೀನ್ ಪುತ್ತೂರು, ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರ್ವಹಿಸಿದರು. ಸುಧಾ ಪುರುಷೋತ್ತಮ್ ವಂದಿಸಿದರು.

Leave a Comment