ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶದ ಪೂರ್ವಭಾವಿಯಾಗಿ 48 ದಿನಗಳ ಕಾಲ ನಡೆಯಲಿರುವ ಸಂಧ್ಯಾ ಭಜನಾ ಸಂಕೀರ್ತನೆಗೆ ಗುರುವಾರ ಸಂಜೆ ಅರ್ಚಕ ಶಿವರಾಮ ಶಿಬರಾಯ ಮತ್ತು ಉಷಾ ಶಿಬರಾಯ ದಂಪತಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು.
ಗ್ರಾಮದಲ್ಲಿ ಹಬ್ಬದ ವಾತಾವರಣ: ತಳಿರು ತೋರಣ, ರಂಗೋಲಿ, ಧ್ವಜ ಪತಾಕೆಗಳಿಂದ ಭಕ್ತರನ್ನು ಕೈ ಬೀಸಿ ಕರೆಯುತ್ತಿರುವ ದೇವಂದಬೆಟ್ಟು ಕ್ಷೇತ್ರದಲ್ಲಿ ಮೊದಲ ದಿನ ಯಶಸ್ವಿಯಾಗಿ ನೆರವೇರಿದ ಕಾರ್ಯಕ್ರಮಕ್ಕೆ ನೂರಕ್ಕೂ ಅಧಿಕ ಮಂದಿ ಭಜಕರು ಭಾಗಿಯಾದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ, ಸಂಚಾಲಕ ತೇವು ತಾರನಾಥ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ವ್ಯವಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಸದಸ್ಯರಾದ ದಿವಾಕರ ಶೆಟ್ಟಿ ಕುಪ್ಪಿಲ,
ಸತೀಶ್ ಶೆಟ್ಟಿ ಮೊಡಂಕಾಪು, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಅಮಿತಾ ವಿಶ್ವನಾಥ ದಾಸರಕೋಡಿ, ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ, ಪ್ರಮುಖರಾದ ನಾರಾಯಣ ಹೊಳ್ಳ, ಪ್ರಕಾಶ್ ಬಿ ಶೆಟ್ಟಿ ಶ್ರೀಶೈಲ, ವೇಣುಗೋಪಾಲ ಶೆಟ್ಟಿ ಕುಪ್ಪಿಲ, ಪ್ರತಿಭಾ ಪಿ ಶೆಟ್ಟಿ, ಉಮಾಚಂದ್ರಶೇಖರ್, ಯೋಗೀಶ್ ಭಟ್ ಕನಪಾಡಿ, ಭುಜಂಗ ಭಂಡಾರಿ ಕೈಕಂಬ, ಉಮೇಶ್ ಗಾಂದೋಡಿ, ವಿಶ್ವನಾಥ್ ದಾಸರಕೋಡಿ, ಪೂವಪ್ಪ ಸಪಲ್ಯ ಮತ್ತಿತರರಿದ್ದರು. ಮೊದಲ ದಿನದ ಭಜನಾ ಸೇವೆಯನ್ನು ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರು ನಡೆಸಿಕೊಟ್ಟರು.














