ಬಿ.ಸಿ.ರೋಡು: ಕಾಂಗ್ರೆಸ್ ಜನಜಾಗೃತಿ ಅಭಿಯಾನ 'ಪಂಚ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುದಿಲ್ಲ :ಬಿ.ರಮಾನಾಥ ರೈ

Coastal Bulletin
ಬಿ.ಸಿ.ರೋಡು: ಕಾಂಗ್ರೆಸ್ ಜನಜಾಗೃತಿ ಅಭಿಯಾನ 'ಪಂಚ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುದಿಲ್ಲ :ಬಿ.ರಮಾನಾಥ ರೈ

ಬಂಟ್ವಾಳ:ದೇಶದಲ್ಲಿ ಬಡಜನತೆಗೆ ಕಾಂಗ್ರೆಸ್ ಮಾತ್ರ ನಿವೇಶನ, ವಸತಿ, ಶಿಕ್ಷಣ ಮತ್ತಿತರ ಮೂಲಭೂತ ಸೌಕರ್ಯ ನೀಡಿದ್ದರೆ ಬಿಜೆಪಿ ಕೇವಲ ಧರ್ಮ ಮತ್ತು ದೇಶದ ಹೆಸರಿನಲ್ಲಿ ಸುಳ್ಳಿನ ಸರಮಾಲೆ ಹೆಣೆದು ಅಧಿಕಾರ ಗಿಟ್ಟಿಸಿಕೊಳ್ಳುತ್ತಿದೆ. ಇಲ್ಲಿನ ಶಾಸಕರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಿವೇಶನ ಅಥವಾ ಹಕ್ಕುಪತ್ರ ನೀಡದೆ ಕನಿಷ್ಟ ಕೆಡಿಪಿ ಸಭೆಯನ್ನೂ ನಡೆಸಿಲ್ಲ. ಮುಂದಿನ ದಿನಗಳಲ್ಲಿ ಕೆಡಿಪಿ ಮತ್ತು ಅಕ್ರಮ-ಸಕ್ರಮ ಸಮಿತಿ ಸಭೆ ನಡೆಸದಿದ್ದರೆ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಲಿದೆ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಮುರೊಳಿ ಎಚ್ಚರಿಸಿದ್ದಾರೆ

ಇಲ್ಲಿನ ಬಿ.ಸಿ.ರೋಡು ಆಡಳಿತ ಸೌಧ ಎದುರು ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ನಡೆದ ಜನಜಾಗೃತಿ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಕಾಂಗ್ರೆಸ್ ಮುಖಂಡ ಎಂ.ಜಿ.ಹೆಗ್ಡೆ ಮಾತನಾಡಿ, 'ಬಿಜೆಪಿ ಜನರನ್ನು ಜಾತಿ-ಧರ್ಮಗಳ ಹೆಸರಿನಲ್ಲಿ ವಿಭಜಿಸುತ್ತಿದ್ದರೆ ಕಾಂಗ್ರೆಸ್ ಎಲ್ಲರನ್ನೂ ಒಟ್ಟಾಗಿ ಜೋಡಿಸುವ ಕೆಲಸ ಮಾಡುತ್ತಿದೆ ಎಂದರು.

ಕೆಪಿಸಿಸಿ ಉಪಾಧ್ಯಕ್ಷ , ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 'ಪಂಚ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ ಆಗುವುದಿಲ್ಲ. ಇದಕ್ಕೆ ಬದಲಾಗಿ ಅದಾನಿ, ಅಂಬಾನಿ ಅವರಂತಹ ಬಂಡವಾಳಶಾಹಿಗಳು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಪಡೆದು ವಂಚಿಸಿದಾಗ ದೇಶ ದಿವಾಳಿಯಾಗುತ್ತದೆ.' ಎಂದರು.

ಕೆಪಿಸಿಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ ಪಿಯೂಸ್ ಎಲ್.ರಾಡ್ರಿಗಸ್, ಪುರಸಭಾಧ್ಯಕ್ಷ

ವಾಸು ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನವಾಜ್ ಬಡಕಬೈಲು, ಪ್ರಮುಖರಾದ ಅಬ್ಬಾಸ್ ಆಲಿ, ಸುದರ್ಶನ್ ಜೈನ್, ಜಯಂತಿ ಪೂಜಾರಿ, ಲವಿನಾ ವಿಲ್ಮಾ ಮೊರಾಸ್, ಸುಭಾಶ್ಚಂದ್ರ ರೈ, ಬಿ.ಪದ್ಮಶೇಖರ್ ಜೈನ್, ಕೆ.ಮಾಯಿಲಪ್ಪ ಸಾಲ್ಯಾನ್, ಸಂಜೀವ ಪೂಜಾರಿ ಮೆಲ್ಕಾರ್, ಸುದೀಪ್ ಕುಮಾರ್ ಶೆಟ್ಟಿ, ಕೆ.ಪದ್ಮನಾಭ ರೈ, ಐಡಾ ಸುರೇಶ್, ಶಿವಪ್ಪ ಪೂಜಾರಿ, ಪ್ರಜ್ವಲ್ ಶೆಟ್ಟಿ, ಗಣೇಶ ಪೂಜಾರಿ, ಲೋಲಾಕ್ಷ ಶೆಟ್ಟಿ, ಸದಾಶಿವ ಬಂಗೇರ ಮತ್ತಿತರರು ಇದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ ಸ್ವಾಗತಿಸಿ, ಪುರಸಭಾ ಸದಸ್ಯ ಜಗದೀಶ ಕುಂದರ್ ವಂದಿಸಿದರು. ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Leave a Comment