ಕೊಡ್ಮಾಣ್ : 37ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

Coastal Bulletin
ಕೊಡ್ಮಾಣ್ : 37ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

ಬಂಟ್ವಾಳ: ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇದರ ಅಶ್ರಯದಲ್ಲಿ ಸೆ. 29ರಿಂದ ಅ.2ರ ವರೆಗೆ ನಾಲ್ಕು ದಿನಗಳ ಕಾಲ ನಡೆಯುವ 37ನೇ ವರುಷದ ಶ್ರೀ ಶಾರದಾ ಪೂಜಾ ಮಹೋತ್ಸವಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅರ್ಚಕರಾದ ಗಿರೀಶ್ ಭಟ್ ದೀಪ ಬೆಳಗಿಸಿ ಚಾಲನೆ ನೀಡಿ, ರಾ, ಸ್ವ, ಸೇ, ಸಂಘದ ಮಂಗಳೂರು ವಿಭಾಗ ಸಹ ಕಾರ್ಯವಾಹರಾದ ಹರಿಕೃಷ್ಣ ಧ್ವಜಾರೋಹಣಗೈದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗೋ ಸಂಸ್ಥಾನ ಟ್ರಸ್ಟ್ (ರಿ) ಅಧ್ಯಕ್ಷರಾದ ಶ್ರೀ ಭಕ್ತಿ ಭೂಷಣ್ ಪ್ರಭುಜೀ, ಫರಂಗಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪುoಚಮೆ,ಕಳ್ಳಿಗೆ ಗ್ರಾ ಪಂ ಸದಸ್ಯ ದಾಮೋದರ ನೆತ್ತರಕೆರೆ,ಮೇರಮಜಲು ಗ್ರಾ, ಪo ಅಧ್ಯಕ್ಷ ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ, ಶಾರದಾ ಮಹೋತ್ಸವದ

ರೂವಾರಿ ಪದ್ಮನಾಭ ಶೆಟ್ಟಿ ಕೊಟ್ಟಿoಜ,ಸಂಯೋಜಕ ಲಕ್ಷ್ಮೀಕಾಂತ್ ನಾಯಕ್ ಕೊಡ್ಮಾಣ್, ಉತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪಾಪೆದಡಿ ಪ್ರ, ಕಾರ್ಯದರ್ಶಿ ಚೇತನ್ ಕುಮಾರ್ ಕಾಂಜಿಲಕೋಡಿ, ಕೋಶಾಧಿಕಾರಿ ಸುರೇಂದ್ರ ಆಳ್ವ ಪೊನ್ನೋಡಿ, ಉತ್ಸವ ಸಮಿತಿಯ ಸಂಯೋಜಕರುಗಳು, ಉಪಾಧ್ಯಕ್ಷರುಗಳು, ಸಹ ಕಾರ್ಯದರ್ಶಿಗಳು ಮತ್ತಿತರರು ಉಪಸ್ಥಿತರಿದ್ದರು.

ಗೋಪಾಲ್ ಕುಲಾಲ್ ಗೋವಿಂತೋಟ ಸ್ವಾಗತಿಸಿ, ಜಗದೀಶ್ ಕಡೆಗೋಳಿ ಕಾರ್ಯಕ್ರಮ ನಿರೂಪಣೆ ಮಾಡಿದರು.

Leave a Comment