ಬಂಟ್ವಾಳ :ಬಿಜೆಪಿಯನ್ನು ಅಧಿಕಾರದಿಂದ ದೂರವಿರಿ ಸಲು ಎಸ್‌ಡಿಪಿಐ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಹಿಂದೆ ಬಿಜೆಪಿಯೂ ಹೊಂದಾಣಿಕೆ ಮಾಡಿಕೊಂಡಿಲ್ಲವೇ ಎಂಬ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹೇಳಿಕೆ ದಾರಿ ತಪ್ಪಿಸುವಂತಿದ್ದು, ಬಿಜೆಪಿ ಇದುವರೆಗೂ ಬಂಟ್ವಾಳದಲ್ಲಿ ಅಂಥ ಕೆಲಸ ಮಾಡಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಿ.ದಿನೇಶ್ ಭಂಡಾರಿ ಹೇಳಿದ್ದಾರೆ.
ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿ ಆಯ್ಕೆಯಾಗುವ ಸಂದರ್ಭ ನಮಗೆ ಕಾಂಗ್ರೆಸ್‌ನಿಂದ ಆಯ್ಕೆಯಾದ ಇಬ್ಬರು ಸದಸ್ಯರು ಮತ ನೀಡಿದರೇ ವಿನಃ ಮುಸ್ಲಿಂ ಲೀಗ್ ಬೆಂಬಲದಿಂದಲ್ಲ, ಆ ಸಂದರ್ಭ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಪಕ್ಷದಿಂದಲೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಗಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎರಡು ಪುರಸಭಾ ಸದಸ್ಯರ ಬೆಂಬಲದಿಂದ ತಾನು ಪುರಸಭೆ ಅಧ್ಯಕ್ಷನಾಗಿದ್ದೆ. ಈ ಚುನಾವಣೆಯಲ್ಲಿ ಸ್ವತಃ ರಮಾನಾಥ ರೈ ಸಹ ಮಾ- ಮತದಾನದಲ್ಲಿ ಭಾಗವಹಿಸಿದ್ದು, ಇದು ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಅವಮಾನ
ತಪ್ಪಿಸಿಕೊಳ್ಳಲು ರೈ ಅವರು ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ. ಅವರು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿ. ಅದನ್ನು ಹೊರತುಪಡಿಸಿ ಎಸ್‌ಡಿಪಿಐ ಜತೆ ಅಧಿಕಾರ ಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಕೇಡಿನ ವಿಚಾರ ಎಂದರು.
ಪಕ್ಷದ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಳಾದ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ ಉಪಾಧ್ಯಕ್ಷ ಗೋವಿಂದ ಪ್ರಭು, ಕಾರ್ ದರ್ಶಿಗಳಾದ ಪ್ರಭಾಕರ ಪ್ರಭು, ಜನಾರ್ದನ ಬೊಂಡಾಲ, ಕಚೇರಿ ಕಾರ್ಯದರ್ಶಿ ಪ್ರಣಾಮ್ ಅಜ್ಜಿಬೆಟ್ಟು, ಮಂಡಲದ ಮಾಧ್ಯಮ ಪ್ರಮುಖ್ ಪುರುಷೋತ್ತಮ್ ಶೆಟ್ಟಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಭಂಡಾರಿಬೆಟ್ಟು ಉಪಸ್ಥಿತರಿದ್ದರು.















