ಮಂಗಳೂರು : ಭೂಕುಸಿತದಿಂದ ರೈಲು‌ ಸಂಚಾರ‌ ಸ್ಥಗಿತ.

Coastal Bulletin
ಮಂಗಳೂರು : ಭೂಕುಸಿತದಿಂದ ರೈಲು‌ ಸಂಚಾರ‌ ಸ್ಥಗಿತ.

ಮಂಗಳೂರು :ಜೋರಾಗಿ ಸುರಿಯುತ್ತಿರುವ ಮಳೆಗೆ ಮಂಗಳೂರಿನ ಪಡೀಲ್ – ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ನಡುವಿನ ರೈಲ್ವೆ ಹಳಿಗೆ ಗುರುವಾರ ಬೆಳಗ್ಗೆ ಮಣ್ಣು ಕುಸಿದಿದೆ. ಹಳಿಗೆ ಮಣ್ಣು ಕುಸಿದಿರುವ ಕಾರಣ ಇಂದು ಹಲವು ರೈಲು ಸಂಚಾರ ರದ್ದಾಗಿದೆ.

ರೈಲು ಸಂಖ್ಯೆ 06488 ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್‌ ಮತ್ತು ರೈಲು ಸಂಖ್ಯೆ 06489 ಮಂಗಳೂರು ಸೆಂಟ್ರಲ್- ಸುಬ್ರಹ್ಮಣ್ಯ ರೋಡ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಪ್ರಯಾಣ ರದ್ದುಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Leave a Comment