ಬೆಂಜನಪದವು: ಜು.3 ರಂದು ರೋಟರಿ ಜಿಲ್ಲಾ ಗವರ್ನರ್ ಪದಗ್ರಹಣ ಬಂಟ್ವಾಳದಲ್ಲಿ 'ಬ್ಲಡ್ ಬ್ಯಾಂಕ್' ಆರಂಭಿಸಲು ಚಿಂತನೆ.

Coastal Bulletin
ಬೆಂಜನಪದವು: ಜು.3 ರಂದು ರೋಟರಿ ಜಿಲ್ಲಾ ಗವರ್ನರ್ ಪದಗ್ರಹಣ ಬಂಟ್ವಾಳದಲ್ಲಿ 'ಬ್ಲಡ್ ಬ್ಯಾಂಕ್' ಆರಂಭಿಸಲು ಚಿಂತನೆ.

ಬಂಟ್ವಾಳ: ಸುಮಾರು 54 ವರ್ಷಗಳ ಹಿನ್ನೆಲೆ ಹೊಂದಿರುವ ಇಲ್ಲಿನ ಪ್ರತಿಷ್ಠಿತ ಬಂಟ್ವಾಳ ರೋಟರಿ ಕ್ಲಬ್ ಇದರ ಹಿರಿಯ ಸದಸ್ಯನಾಗಿ ಇದೀಗ 4 ಕಂದಾಯ ಜಿಲ್ಲೆ ಮುನ್ನಡೆಸುವ ಜಿಲ್ಲಾ ಗವರ್ನರ್ ಆಗಿ ಚುನಾವನೆಯಲ್ಲಿ ಆಯ್ಕೆಯಾಗಿದ್ದು, ಜು.3ರಂದು ಬೆಂಜನಪದವು ಶುಭಲಕ್ಷ್ಮಿ ಅಡಿಟೋರಿಯಂ ನಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಗವರ್ನರ್ ಎನ್.ಪ್ರಕಾಶ ಕಾರಂತ್ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಸಂಜೆ 5.30 ಗಂಟೆಗೆ ನಡೆಯುವ ಪದಗ್ರಹಣ ಕಾರ್ಯಕ್ರಮದಲ್ಲಿ ನಿಟ್ಟೆ ಕೆ.ಎಸ್.ಹೆಗ್ಡೆ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎನ್.ವಿನಯ ಹೆಗ್ಡೆ, ನಿಕಟಪೂರ್ವ ರೋಟರಿ ಜಿಲ್ಲಾ ಗವರ್ನರ್ ರವೀಂದ್ರ ಭಟ್, ಅಭಿನಂದನ್ ಶೆಟ್ಟಿ ಕುಂದಾಪುರ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.

ರೋಟರಿ ಅಂತರ್ ರಾಷ್ಟ್ರೀಯ ಅಧ್ಯಕ್ಷೆ ಜೆನ್ನಿಫರ್ ಇ. ಜೋನ್ಸ್ ಇವರ ಪರಿಕಲ್ಪನೆಯಂತೆ ಜಿಲ್ಲಾ ಮಟ್ಟದಲ್ಲಿ ಜಲಸಿರಿ, ವನಸಿರಿ, ವಿದ್ಯಾಸಿರಿ ಮತ್ತು ಆರೋಗ್ಯ ಸಿರಿ ಎಂಬ ನಾಲ್ಕು ಯೋಜನೆ ಅನುಷ್ಠಾನಗೊಳ್ಳಲಿದ್ದು, ಬಂಟ್ವಾಳದಲ್ಲಿ 'ಬ್ಲಡ್ ಬ್ಯಾಂಕ್' ರಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಸಹಾಯಕ ಗವರ್ನರ್ ಮಂಜುನಾಥ ಆಚಾರ್ಯ, ಕ್ಲಬ್ಬಿನ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಮಾಣಿ, ಪ್ರಮುಖರಾದ ಕೆ.ನಾರಾಯಣ ಹೆಗ್ಡೆ, ಸಂಜೀವ ಪೂಜಾರಿ ಬಿ.ಸಿ.ರೋಡು, ಡಾ.ಆತ್ಮರಂಜನ್ ರೈ, ಎ.ರಾಮಣ್ಣ ರೈ ಮಾವಂತೂರು ಇದ್ದರು.

Leave a Comment