ಉಪ್ಪಿನಂಗಡಿ: ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ನಲ್ಲಿ ಅನ್ಯಕೋಮಿನ ಯುವಕನೊಬ್ಬ ಹಿಂದೂ ಮಹಿಳೆಗೆ ಕಿರುಕುಳ ನೀಡಿದ್ದರಿಂದ, ಮಹಿಳೆ ಮನನೊಂದು ನಡು ದಾರಿಯಲ್ಲಿ ಬಸ್ ನಿಂದ ಇಳಿದು ಸಂಬಂಧಿಕರ ಮನೆಗೆ ತೆರಳಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮಹಿಳೆ ತನ್ನ ಮಗುವಿನ ಜೊತೆ ಉಪ್ಪಿನಂಗಡಿ ಸಮೀಪದ ಸಂಬಂಧಿಕರ ಮನೆಗೆ ಬಂದು ವಾಪಾಸು ಬೆಂಗಳೂರಿಗೆ ಹೋಗುವಾಗ, ರೆಡ್ ಬಸ್ ಆಪ್ ಮುಖಾಂತರ ಭಾರತಿ ಬಸ್ ನಲ್ಲಿ ಸ್ಲೀಪರ್ ಸೀಟ್ ಬುಕ್ ಮಾಡಿದ್ದರು. ಮಹಿಳೆ ಬಸ್ ಹತ್ತುವ ವೇಳೆ ಆ ಸೀಟ್ ನಲ್ಲಿ ನಶೆಯಲ್ಲಿದ್ದ ಮುಸ್ಲಿಂ ಯುವಕ ಕುಳಿತುಕೊಂಡು
ಇದ್ದ. ಆಗ ಮಹಿಳೆ ಬಸ್ ಚಾಲಕ ಮತ್ತು ನಿರ್ವಾಹಕ ರಿಗೆ ತಿಳಿಸಿದಾಗ, ಮಾತಿನ ಚಕಮುಕಿ ನಡೆಯಿತು.
ಆ ಸಮಯದಲ್ಲಿ ಯಾರ ಮಾತನ್ನು ಕೇಳದ ಯುವಕನನ್ನು ಕಂಡು ಮಹಿಳೆ ತನ್ನ ಸಂಬಂಧಿಕರಿಗೆ ತಿಳಿಸಿದರು. ಸಂಬಂಧಿಕರು ಮಹಿಳೆಯನ್ನು ಅರ್ಧದಾರಿಯಲ್ಲಿ ಕೆಳಗಿಳಿಸಿ, ರೆಡ್ ಬಸ್ ಆಪ್ ಗೆ ಮತ್ತು ಭಾರತಿ ಬಸ್ ಸಂಸ್ಥೆ ಗೆ ದೂರು ನೀಡಿದ್ದಾರೆ.













