Coastal Bulletin

ಉಳ್ಳಾಲ : ಗಾಳದ ಕೊಂಕಣಿ ಅಭ್ಯುದಯ ಸಂಘ ಮಂಗಳೂರು ಇದರ 67 ನೇ ವಾರ್ಷಿಕ ಮಹಾಸಭೆ,ಪ್ರತಿಭಾ ಪುರಸ್ಕಾರ ,ಸಾಧಕರಿಗೆ ಸನ್ಮಾನ,ಪುಸ್ತಕ ವಿತರಣಾ ಕಾರ್ಯಕ್ರಮ ಕುತ್ತಾರಿನ ಶ್ರೀ ದುರ್ಗಾವಾಹಿನಿ ಸಭಾಭವನದಲ್ಲಿ ಭಾನುವಾರ ನಡೆಯಿತು.

ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯಕ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ,ಸಂಘವು ಶಿಕ್ಷಣ ವಿಶೇಷ ಒತ್ತು,ಅಶಕ್ತರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯವಾಗಿದೆ,ನಮ್ಮ ಸಮುದಾಯದ ಗೃಹಿಣಿ ಧನಲಕ್ಷ್ಮೀ ಎಂ.ನಾಯಕ್ ಪಿ.ಎಚ್. ಡಿ ಪದವಿ ಪಡೆದ ಪ್ರಪ್ರಥಮ ಮಹಿಳೆಯಾಗಿ ಗುರುತಿಸಿರುವುದು ನಮ್ಮ ಸಮುದಾಯದ ಗೌರವವನ್ನು ಹೆಚ್ಚಿಸಿದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಪಡೆಯುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.

ಮುಂದಿನ ಎಪ್ರಿಲ್ ನಲ್ಲಿ ನಮ್ಮ ಕುಲದೇವಿ ದೇವಸ್ಥಾನದಲ್ಲಿ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ ನಡೆಸಲುದ್ದೇಶಿಸಲಾಗಿದ್ದು,ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು ಸಹಕರಿಸುವಂತೆ ಅವರು ಕೋರಿದರು.ಮುಖ್ಯ ಅತಿಥಿಯಾಗಿದ್ದ ಉಳ್ಳಾಲ ಶ್ರೀಧರ್ಮರಸು ಕ್ಷೇತ್ರದ ಗುರಿಕಾರರಲ್ಲೊಬ್ಬರಾದ ಅಂತು ಗುರಿಕಾರ ಅವರು ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮುದಾಯದ ಕು.ಕಾವ್ಯ,ಕು.ತಾರುಣ್ಯ,ನಿಶಿತ್ ಟಿ.ನಾಯಕ್ ಅವರನ್ನು ಅಭಿನಂದಿಸಿ ಮಾತನಾಡಿ, ಸಂಘವು ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ ವಾಗಿದೆ.ಪುರಸ್ಕಾರ,ಸಹಕಾರವನ್ನು ಪಡೆದವರು ಸಂಘದ ಮೇಲೆ ಅಭಿಮಾನವನ್ನು ಇಟ್ಟುಕೊಳ್ಳಬೇಕೆಂದರು.

ಶ್ರೀ ಸೋಮೇಶ್ವರೀ ಸೌಹಾರ್ಧ ಸಹಕಾರಿ ನಿಯಮಿತದ ಅಧ್ಯಕ್ಷ ಉಮಾನಾಥ ನಾಯಕ್ ಉಳ್ಳಾಲ ಅತಿಥಿಯಾಗಿದ್ದು, ಶುಭಹಾರೈಸಿದರು. ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ ಅವರು ಸಭಾಧ್ಯಕ್ಷತೆ ವಹಿಸಿದ್ದರು.

ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ ಅಧ್ಯಕ್ಚೆ ಶಾರದಾ ಮೋಹನ್ ನಾಯಕ್ ಸೋಮೇಶ್ವರ, ಸಂಘದ ಉಪಾಧ್ಯಕ್ಷರಾದ ಯೋಗೀಶ್ ನಾಯಕ್ ಪಂಪ್ ವೆಲ್,ಹೇಮಾ ಕೇಶವ ನಾಯಕ್ ಸಂತೋಷ್ ನಗರ,ಖಜಾಂಚಿ ಚಂದ್ರಶೇಖರ ನಾಯಕ್ ಜಪ್ಪುಬಪ್ಪಾಲ್ ವೇದಿಕೆಯಲ್ಲಿದ್ದರು. ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಪ್ರಧಾನಕಾರ್ಯದರ್ಶಿ ಯು.ದಯಾನಂದ ನಾಯಕ್ ಕುಲಶೇಖರ ಅವರು ಕ್ಷೇತ್ರದಲ್ಲಿ‌ ನಡೆದ ಜಾತ್ರಮಹೋತ್ಸವದ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು.

ಇದೇವೇಳೆ 1 ರಿಂದ 10 ತರಗತಿ ವರೆಗಿನ ಸಮುದಾಯದ ಮಕ್ಕಳಿಗೆ ಬರಹ ಪುಸ್ತಕ,ಇತ್ತೀಚೆಗೆ ಆಯೋಜಿಸಲಾದ ಕ್ರೀಡಾಕೂಟದ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಸದಸ್ಯೆ ಧನಲಕ್ಷ್ಮೀ ವಿಜೇತರ ಪಟ್ಟಿ ವಾಚಿಸಿದರು.

ಆದೇರೀತಿ ಸಂಘದ ಹಿರಿಯ ಸದಸ್ಯರಾದ ಪ್ರಭಾಕರ ನಾಯಕ್ ಪಾಂಡೇಶ್ವರ,ವಾಸುದೇವ ನಾಯಕ್ ಬಜಾಲ್ ,ಗೋಡೆ ಬರಹಗಾರರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಚಿತ್ರಕಲಾವಿದ ಜಯರಾಮನಾಯಕ್ ಬಂಟ್ವಾಳ,ಪಿಎಚ್ ಡಿ ಪದವಿ ಪಡೆದ ಡಾ.ಧನಲಕ್ಷ್ಮೀ ಎಂ.ನಾಯಕ್ ಹಾಗೂ ಹಿರಿಯ ಪತ್ರಕರ್ತ ವೆಂಕಟೇಶ್ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು.ಸಂಘಟನಾ ಕಾರ್ಯದರ್ಶಿ ಮಹೇಶ್ ನಾಯಕ್ ಸನ್ಮಾನಿತರ ಸನ್ಮಾನಪತ್ರ ವಾಚಿಸಿದರು.

ಸಂಘದ ಮಾಜಿ ಪ್ರ.ಕಾರ್ಯದರ್ಶಿ ಕೋಡೊ ಜಯ ನಾಯಕ್ ಸ್ವಾಗತಿಸಿದರು.ಕಾರ್ಯದರ್ಶಿ ಆಶಾ ನಾಯಕ್ ಗೋರಿಗುಡ್ಡೆ ಗತವರ್ಷದ ವರದಿವಾಚಿಸಿದರು. ಪ್ರಧಾನಕಾರ್ಯದರ್ಶಿ ಮುರಳೀಧರ ನಾಯಕ್ ಬಬ್ಬಕಟ್ಟೆ ಲೆಕ್ಕಪತ್ರ ಮಂಡಿಸಿದರು.ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು.

 

Leave a Comment