ಬಂಟ್ವಾಳ: ಕಲಾಭಿ (ರಿ) ಮಂಗಳೂರು ಮತ್ತು ಸಮನ್ವಯ ಟ್ಯೂಷನ್ಸ್ ಫರಂಗಿಪೇಟೆ ಸಹಯೋಗದೊಂದಿಗರ ಫರಂಗಿಪೇಟೆ ಶ್ರೀರಾಮ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ವಿಕಾಸ- 2022 ಶ್ರೀರಾಮ ಶಾಲೆಯ ಜಯ ಪದ್ಮ ಗೋಲ್ಡನ್ ಜ್ಯೂಬಿಲಿ ಹಾಲ್ ನಲ್ಲಿ ಚಾಲನೆ ನೀಡಲಾಯಿತು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕೆ ಜಯರಾಮ್ ಶೇಕ ರವರು ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ ,ಹಿರಿಯ ಸಾಹಿತಿ ರಂಗಕರ್ಮಿ ಡಾ. ನಾ. ದಾಮೋದರ ಶೆಟ್ಟಿ ,ಕಲಾಭಿಯ ಗೌರವ ಅಧ್ಯಕ್ಷರಾದ ಬಿ . ಸುರೇಶ ನಾಯ್ಕ , ಬೇಸಿಗೆ ಶಿಭಿರದ ನಿರ್ದೇಶಕಿ ತೃಷಾ ಶೆಟ್ಟಿ ಕೊಟ್ಟಿಂಜ ,ಕವಿತಾ ,ಸಮನ್ವಯ ಟ್ಯೂಷನ್ ಮಾಲಕಿ ಭುವನೇಶ್ವರಿ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಕಾರ ಭಾರತಿಯ ದ.ಕ ಜಿಲ್ಲಾ ಅಧ್ಯಕ್ಷರಾದ ತಾರಾನಾಥ
ಕೊಟ್ಟಾರಿ ತೇವುರವರು ಆಗಮಿಸಿ ಶಿಭಿರಾರ್ಥಿಗಳಿಗೆ ಶುಭ ಹಾರೈಸಿದರು.ಬಳಿಕ ಕೀರ್ತನ್ ನಾಯ್ಗ , ಮಯೂರ್ ನಾಯ್ಗ ರಂಗ ಸಂಜೆ ಕಾರ್ಯಕ್ರಮ ನಡೆಯಿತು,ಶ್ವೇತಾ ಅರಹೊಳೆ ನೃತ್ಯ ಕಾರ್ಯಕ್ರಮ ನಡೆಸಿ ಕೊಟ್ಟರು.
ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ , ಮೈಮ್ ರಾಮದಾಸ್ , ಭುವನ್ ಮಣಿಪಾಲ ( ನೀನಾಸಂ ), ಪ್ರಕಾಶ್( ನೀನಾಸಂ), ಶ್ವೇತಾ ಅರಹೊಳೆ , ಸಾತ್ವಿಕ್ ನೆಲ್ಲಿತೀರ್ಥ ಅವರು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
74 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಬಿರಾರ್ಥಿಗಳಾಗಿ ಭಾಗವಹಿಸಿದರು.















