ಕಿನ್ನಿಗೋಳಿ :ಯುಗಪುರುಷ ಕಿನ್ನಿಗೋಳಿ ಮತ್ತು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ವತಿಯಿಂದ ಶಿಕ್ಷಕಿ,ಸಾಹಿತಿ ಯಗಿರುವ ಶಾಂತಾ ಪುತ್ತೂರು ಇವರಿಗೆ ಯುಗ ಪುರುಷ ರಾಜ್ಯ ಪ್ರಶಸ್ತಿಯನ್ನು ಘೋಷಿಸಿದೆ.
ಏ.30 ರಂದು ಯುಗಪುರುಷ ಸಭಾಭವನ ಕಿನ್ನಿಗೋಳಿ ಯಲ್ಲಿ ಭುವನಾಭಿರಮ ಉಡುಪ ಅಧ್ಯಕ್ಷತೆಯಲ್ಲಿ ನಡೆಯುವ ಕರಾವಳಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಲಿದ್ದು ,ಕ.ಸಾ.ಪ. ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಶಾಂತ ಪುತ್ತೂರು
ಅವರು ಕಸಾಪ ಪರಿಷತ್ತಿನ ಪದಾಧಿಕಾರಿಯಾಗಿದ್ದು ,ಪುತ್ತೂರು ತಾಲೂಕು ಕೇಂದ್ರ ಸಾಹಿತ್ಯ ವೇದಿಕೆ ಅಧ್ಯಕ್ಷರಾಗಿರುತ್ತಾರೆ.ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿದ್ದಾರೆ. ಹಲವು ರಾಜ್ಯ,ರಾಷ್ಟ್ರ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.ಸೌರಭ ಕವನ ಸಂಕಲನ ಪ್ರಕಟಿಸಿದ್ದಾರೆ. ಜ್ಞಾನಸಿಂಧು ರಾಜ್ಯ ಪ್ರಶಸ್ತಿ,ಚೈತನ್ಯ ಶ್ರೀ ರಾಜಕಪ್ರಶಸ್ತಿ,ಸ್ಕೌಟ್ ಗೈಡ್ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.














