ಕರ್ತವ್ಯದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆ ಮೆರೆದ ಮಂಗಳೂರು ಪೊಲೀಸ್‌ ಅಧಿಕಾರಿ ಸಿಬಂದಿಗಳ ತಂಡ ಸಿಎಂ ಪದಕಕ್ಕೆ ಆಯ್ಕೆ.

Coastal Bulletin
ಕರ್ತವ್ಯದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆ ಮೆರೆದ ಮಂಗಳೂರು ಪೊಲೀಸ್‌ ಅಧಿಕಾರಿ ಸಿಬಂದಿಗಳ ತಂಡ ಸಿಎಂ ಪದಕಕ್ಕೆ ಆಯ್ಕೆ.

ಬಂಟ್ವಾಳ :ಕರ್ತವ್ಯದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆ ಮೆರೆದು,ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿರುವುದು ಹಾಗೂ ರಾಜ್ಯದಲ್ಲೇ ಅತಿದೊಡ್ಡ ಪ್ರಮಾಣದ ಎಂಡಿಎಂಎ ಡ್ರಗ್ ಪ್ರಕರಣಗಳನ್ನು ಪತ್ತೆ ಮಾಡಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದ ಹಲವು ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿಯನ್ನು 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆ ಮಾಡಲಾಗಿದೆ.


ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಂಗಳೂರು ನಗರ ఎసిపి ಧನ್ಯಾ ಎನ್.ನಾಯಕ್ ಹಾಗೂ ನಕ್ಸಲರ ಶರಣಾಗತಿ ಅವರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಶ್ಚಿಮ ವಲಯ ಡಿಐಜಿ ಅಮಿತ್ ಸಿಂಗ್ ಅವರನ್ನು ಪದಕಕ್ಕೆ ಆಯ್ಕೆ ಮಾಡಲಾಗಿದೆ. ಜತೆಗೆ ಉಳ್ಳಾಲ ಇನ್‌ಸ್ಪೆಕ್ಟರ್ ಬಾಲಕೃಷ್ಣ ಎಚ್. ಎನ್., ಸುರತ್ಕಲ್ ಠಾಣೆ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಸುರತ್ಕಲ್ ರಾಘವೇಂದ್ರ ಮಂಜುನಾಥ ನಾಯ್ಕ ಕಂಕನಾಡಿ ನಗರ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೆಬಲ್ (ಎಚ್‌ಸಿ) ರೆಜಿ

ವಿ.ಎಂ., ಮಂಗಳೂರು ಸಿಸಿಬಿ ಎಚ್ ಅಂಜನಪ್ಪ ಭೀಮಪ್ಪ ಉಪ್ಪಾರ, ಸುರತ್ಕಲ್ ಎಚ್‌ಸಿ ಅಣ್ಣಪ್ಪ ಉಮೇಶ್ ಕುಮಾ‌ರ್, ಸಿಸಿಬಿಪಿಸಿ ಪುರುಷೋತ್ತಮ, ಮಂಗಳೂರು ಸೆನ್ ಠಾಣೆಯ ಎಚ್‌ಸಿ , ಪ್ರವೀಣ್ ಎಂ.ಸಿ. ಸೆನ್ ಇನ್ ಉಪವಿಭಾಗ ಸ್ಪೆಕ್ಟರ್ ಗುರಪ್ಪ ಕಾಂತಿ, ಸಿಸಿಬಿ ಎಎಸ್‌ಐ ಶೀನಪ್ಪ ಎಆರ್‌ಎಸ್‌ಐ ಮಾಡಿಸಿ ರಿತೇಶ್, ಎಚ್‌ಸಿಗಳಾದ ಸುಧೀರ್ ಕುಮಾರ್, ಸಂತೋಷ್ ಕುಮಾರ್, ದಾಮೋದರ್, ವಿಜಯ ಶೆಟ್ಟಿ ಶ್ರೀಧರ್ ವಿ., ಸಿಸಿಬಿ ಪಿಸಿಗಳಾದ ಪ್ರಕಾಶ್ ಎಸ್ ಸತ್ತಗಿಹಳ್ಳಿ ಅಭಿಷೇಕ್ ಎ.ಆ‌ರ್. ಅವರನ್ನು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದೆ.

Leave a Comment