ಬಂಟ್ವಾಳ : ತುಂಬೆ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆಯು ಡಿ. 29ರಂದು ಸೋಮವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಿದ್ಯಾ ಕೆ ಮಹಿಳಾ ಸಾಂತ್ವನ ಕೇಂದ್ರ ಬಂಟ್ವಾಳ ಇವರು ಮಕ್ಕಳ ಹಕ್ಕು ಮತ್ತು ರಕ್ಷಣೆಯ ಕುರಿತು ಮಾಹಿತಿ ನೀಡಿದರು. ಶಾಲಾ ಮಕ್ಕಳು ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಕೇಶವ, ಉಪಾಧ್ಯಕ್ಷ ಗಣೇಶ್ ಸಾಲಿಯಾನ್ ತುಂಬೆ, ಸದಸ್ಯರಾದ ಇಬ್ರಾಹಿಂ, ಜಯಂತಿ ನಾಗೇಶ್, ಗುಣವತಿ ಹಿರಿಯ ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಇಲಾಖೆ ಬಂಟ್ವಾಳ, ಪಂಚಾಯತ್
ಅಭಿವೃದ್ಧಿ ಅಧಿಕಾರಿ ಶಿವುಲಾಲ್ ಚವ್ಹಾಣ್, ಶಾಲಾ ಅಧ್ಯಾಪಕರುಗಳಾದ ಜಗದೀಶ್ ರೈ ಬಿ.ಎ ಶಾಲೆ, ಮೀನ ಅಸುಂಪ್ತಾ ಪಿಂಟೊ ದ.ಕ.ಜಿ.ಕಿ.ಪ್ರಾ.ಶಾಲೆ ವಳವೂರು, ಸಾತ್ವಿಕ್ ಕುನಿಲ್ ಇಲ್ಮುನ್, ಕೆ ಶ್ರೀಮತಿ ದೇವಿ ದ.ಕ.ಜಿ.ಹಿ.ಪ್ರಾ.ಶಾಲೆ ತುಂಬೆ, ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಶಾಲಾ ಮಕ್ಕಳು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷರು ರುಬೀನ ಮತ್ತು ಉಪಾಧ್ಯಕ್ಷರು ದಯಾಮಿ ವಂದನಾರ್ಪಣೆಯನ್ನು ಸಲ್ಲಿಸಿದರು.















